Home Uncategorized ತ್ವರಿತಗತಿ ಕಾಮಗಾರಿಯಿಂದ ಅಪಘಾತ ಸಂಭವಿಸಿಲ್ಲ: ಬಿಎಂಆರ್‌ಸಿಎಲ್ ಸ್ಪಷ್ಟನೆ

ತ್ವರಿತಗತಿ ಕಾಮಗಾರಿಯಿಂದ ಅಪಘಾತ ಸಂಭವಿಸಿಲ್ಲ: ಬಿಎಂಆರ್‌ಸಿಎಲ್ ಸ್ಪಷ್ಟನೆ

15
0

ತ್ವರಿತಗತಿ ಕಾಮಗಾರಿಯಿಂದ ದುರಂತ ಸಂಭವಿಸಿಲ್ಲ ಎಂದು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ (ಬಿಎಂಆರ್‌ಸಿಎಲ್) ಹಿರಿಯ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ. ಬೆಂಗಳೂರು: ತ್ವರಿತಗತಿ ಕಾಮಗಾರಿಯಿಂದ ದುರಂತ ಸಂಭವಿಸಿಲ್ಲ ಎಂದು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ (ಬಿಎಂಆರ್‌ಸಿಎಲ್) ಹಿರಿಯ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.

ತ್ವರಿತಗತಿ ಕಾಮಗಾರಿಯಿಂದ ದುರಂತ ಸಂಭವಿಸಿಲ್ಲ. ಅಪಘಾತದ ಕಾರಣ ಕಾಮಗಾರಿ ಪೂರ್ಣಗೊಳ್ಳುವುದು ಮತ್ತಷ್ಟು ವಿಳಂಬವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಮೆಟ್ರೋ ಕಾಮಗಾರಿಗಳು ಕಾರ್ಯಗತಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಏರ್‌ಪೋರ್ಟ್ ಮೆಟ್ರೊ ಮಾರ್ಗದ ಕಾಮಗಾರಿ (ಅಪಘಾತ ಸಂಭವಿಸಿದ) 2025ಕ್ಕೆ ಪೂರ್ಣಗೊಳ್ಳಬೇಕಿದೆಯೇ ಹೊರತು 2023ಕ್ಕೆ ಅಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ವಿಮಾನ ನಿಲ್ದಾಣದ ಮೆಟ್ರೋ ಮಾರ್ಗದ ಕಾಮಗಾರಿ ಕುರಿತು ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್‌ಸಿಎಲ್ ಅಧಿಕಾರಿಗಳು, ಅಪಘಾತದ ಕಾರಣ ಲೆಕ್ಕಪರಿಶೋಧನೆ, ಐಐಎಸ್’ಸಿ ವರದಿಗಳನ್ನು ನಿರೀಕ್ಷಿಸುತ್ತಿರುವುದರಿಂದ ಕೆಲಸವು ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಅಪಘಾತದ ಬಳಿಕ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ. ಯಾವುದೇ ಅಹಿತಕರ ಘಟನೆಗೆ ಹೆದರಿ ಕಾರ್ಮಿಕರು ಕೆಲಸ ಆರಂಭಿಸಲು ಮುಂದಾಗುತ್ತಿಲ್ಲ. ಇತರ ಪ್ರದೇಶಗಳಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ, ಅಲ್ಲಿನ ಕೆಲಸಗಳೂ ವಿಳಂಬವಾಗುತ್ತಿದೆ. ಜನರಲ್ಲಿ ವಿಶ್ವಾಸದ ಭಾವನೆಯನ್ನು ತರಲು ಮತ್ತು ಎಲ್ಲಾ ಸುರಕ್ಷತಾ ಕ್ರಮಗಳ ಜಾರಿಗೆ ತರಲು ಸಭೆಗಳನ್ನು ನಡೆಸುತ್ತಿದ್ದೇವೆ. ಐಐಎಸ್‌ಸಿಯಿಂದ ವರದಿ ಬಂದ ನಂತರ ಕಾಮಗಾರಿ ಕಾರ್ಯಗಳು ಮರಳಿ ಆರಂಭವಾಗಲಿವೆ ಎಂದಿದ್ದಾರೆ.

LEAVE A REPLY

Please enter your comment!
Please enter your name here