Home Uncategorized ‘ದ್ವಿಪಾತ್ರ’ ಚಿತ್ರದಲ್ಲಿ ವಿಚಿತ್ರ ಸೈಕೋ ಕಿಲ್ಲರ್​ ಕಹಾನಿ; ಗಮನ ಸೆಳೆದ ಹೊಸ ಸಿನಿಮಾ ಟ್ರೇಲರ್​

‘ದ್ವಿಪಾತ್ರ’ ಚಿತ್ರದಲ್ಲಿ ವಿಚಿತ್ರ ಸೈಕೋ ಕಿಲ್ಲರ್​ ಕಹಾನಿ; ಗಮನ ಸೆಳೆದ ಹೊಸ ಸಿನಿಮಾ ಟ್ರೇಲರ್​

21
0

ಕಿರುತೆರೆಯಲ್ಲಿ ನಟ ಚಂದು ಗೌಡ (Chandu Gowda) ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಹಲವು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಅವರು ಬಣ್ಣ ಹಚ್ಚಿರುವ ಹೊಸ ಸಿನಿಮಾ ‘ದ್ವಿಪಾತ್ರ’ (Dwipatra Movie) ಮೇಲೆ ನಿರೀಕ್ಷೆ ಮೂಡಿದೆ. ಈ ಚಿತ್ರದ ಟ್ರೇಲರ್​ ಇತ್ತೀಚೆಗೆ ಬಿಡುಗಡೆ ಆಗಿದೆ. ಚಂದು ಗೌಡ ಜೊತೆ ಸತ್ಯ ಅವರು ಹೀರೋ ಆಗಿ ನಟಿಸಿದ್ದಾರೆ. ಮಾಳವಿಕಾ ಅವಿನಾಶ್​, ಪಾಯಲ್​ ಚೆಂಗಪ್ಪ, ಅವಿನಾಶ್​, ಸುಚೇಂದ್ರ ಪ್ರಸಾದ್​, ಅಶ್ವತ್ಥ್​ ನೀನಾಸಂ, ಸ್ನೇಹಾ ಹೆಗಡೆ, ಪ್ರಶಾಂತ್​ ಸಿದ್ಧಿ, ರಘು ವೈನ್​ ಸ್ಟೋರ್​ ಮುಂತಾದವರು ಬಣ್ಣ ಹಚ್ಚಿದ್ದಾರೆ. ‘ದ್ವಿಪಾತ್ರ’ ಚಿತ್ರಕ್ಕೆ ಶ್ರೀವತ್ಸ ಆರ್​. ನಿರ್ದೇಶನ ಮಾಡಿದ್ದಾರೆ. ಇದೊಂದು ಮರ್ಡರ್​ ಮಿಸ್ಟರಿ ಸಿನಿಮಾ. ಸಸ್ಪೆನ್ಸ್​-ಥ್ರಿಲ್ಲರ್​ ಶೈಲಿಯಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ ಸೈಕೋ ಸೀರಿಯಲ್​ ಕಿಲ್ಲರ್​ (Serial Killer) ಕಹಾನಿ ಹೈಲೈಟ್​ ಆಗಿರಲಿದೆ.

ನಿರ್ದೇಶಕ ಶ್ರೀವತ್ಸ ಅವರು ಮೂಲತಃ ಚಾರ್ಟರ್ಡ್​ ಅಕೌಂಟೆಂಟ್​ ಆಗಿದ್ದವರು. ಸಿನಿಮಾ ಮೇಲಿನ ಆಸಕ್ತಿಯಿಂದ ನಿರ್ದೇಶಕನ ಕ್ಯಾಪ್​ ಧರಿಸಿದ್ದಾರೆ. ಕೇರಳದಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧರಿಸಿ ‘ದ್ವಿಪಾತ್ರ’ ಸಿನಿಮಾ ಮಾಡಿದ್ದಾರೆ. ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಸಿನಿಮಾ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡರು. ‘ಡಬಲ್ ಡಿಎನ್‌ಎ ಮನುಷ್ಯನಿಗಿದ್ದರೆ ಏನಾಗುತ್ತೆ? ಆತನೊಬ್ಬ ಸೈಕೋ ಕಿಲ್ಲರ್ ಆದರೆ ಹೇಗಿರುತ್ತೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. 4 ಪಾತ್ರಗಳು ಪ್ರಮುಖವಾಗಿವೆ. ಹಿನ್ನೆಲೆ ಸಂಗೀತ ಕೂಡ ಈ ಚಿತ್ರದ ದೊಡ್ಡ ಶಕ್ತಿ. ಸಿನಿಮಾದ ನಿರೂಪಣೆ ತುಂಬ ಫಾಸ್ಟ್​ ಆಗಿದೆ’ ಎಂದು ಅವರು ಹೇಳಿದ್ದಾರೆ.

ತನಿಖಾಧಿಕಾರಿ ಪಾತ್ರಕ್ಕೆ ಚಂದು ಗೌಡ ಬಣ್ಣ ಹಚ್ಚಿದ್ದಾರೆ. ಈ ಕಥೆಯ ಮೇಲೆ ಅವರಿಗೆ ಸಖತ್​ ಭರವಸೆ ಇದೆ. ಅವರಿಗೆ ಜೋಡಿಯಾಗಿ ಸ್ನೇಹಾ ಹೆಗಡೆ ಅಭಿನಯಿಸಿದ್ದಾರೆ. ‘ಅಮೃತಾಂಜನ್​’ ಕಿರುಚಿತ್ರದ ಮೂಲಕ ಫೇಮಸ್​ ಆದ ನಟಿ ಪಾಯಲ್​ ಚೆಂಗಪ್ಪ ಅವರು ಈ ಸಿನಿಮಾದಲ್ಲಿ ಡಿಟೆಕ್ಟೀವ್​ ಪಾತ್ರ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಕಾಮಿಡಿ ಪಾತ್ರಗಳನ್ನು ಮಾಡುತ್ತಿದ್ದ ಅವರಿಗೆ ‘ದ್ವಿಪಾತ್ರ’ ಚಿತ್ರದಲ್ಲಿ ಗಂಭೀರವಾದ ಪಾತ್ರ ಸಿಕ್ಕಿದೆ.

ಸತ್ಯಾಶ್ರಯ, ಹೆಬ್ಬಗೋಡಿ ಮಧುಸೂದನ್​, ಜಯಶ್ರೀ ಅವರು ಜೊತೆಯಾಗಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಮರ್​ ಗೌಡ ಛಾಯಾಗ್ರಹಣ, ಮಂಜು ಆರ್​. ಸಂಕಲನ ಮಾಡಿದ್ದಾರೆ. ‘ದ್ವಿಪಾತ್ರ’ ಚಿತ್ರದ ಕೆಲಸಗಳೆಲ್ಲ ಪೂರ್ಣಗೊಂಡಿವೆ. ಶೀಘ್ರದಲ್ಲೇ ಸೆನ್ಸಾರ್​ ಪ್ರಮಾಣಪತ್ರ ಸಿಗಲಿದೆ. ಆ ಬಳಿಕ ಬಿಡುಗಡೆ ದಿನಾಂಕ ಘೋಷಿಸಲಾಗುವುದು. ಎಲ್ಲ ಪಾತ್ರಗಳಿಗೆ ಡಬಲ್​ ಶೇಡ್​ ಇರುವುದರಿಂದ ‘ದ್ವಿಪಾತ್ರ’ ಎಂದು ಶೀರ್ಷಿಕೆ ಇಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

LEAVE A REPLY

Please enter your comment!
Please enter your name here