Home ಬೆಂಗಳೂರು ನಗರ ಡಿಸೆಂಬರ್ 5 ರಂದು ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಉದ್ಘಾಟನೆ

ಡಿಸೆಂಬರ್ 5 ರಂದು ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಉದ್ಘಾಟನೆ

175
0
Rashtrotthana Jaydev Memorial Hospital & Research Centre

ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ವೃತ್ತಿಪರ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶ

ಬೆಂಗಳೂರು (Bengaluru):

ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ (Jaydev Memorial Rashtrotthana Hospital And Research Centre ) ಇದೇ ಡಿಸೆಂಬರ್ 5ರಂದು ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದೆ.

ಸಂಜೆ 6 ಗಂಟೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರವನ್ನು ಪ್ರಾರಂಭಿಸುತ್ತಿದೆ. ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರದಲ್ಲಿ ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ.

ಇನ್ಫೋಸಿಸ್ ಫೌಂಡೇಷನ್​ ಸಂಸ್ಥಾಪಕಿ ಸುಧಾಮೂರ್ತಿ, ನಾರಾಯಣ ಹೆಲ್ತ್​ ಸ್ಥಾಪಕ ಮತ್ತು ಅಧ್ಯಕ್ಷ ಡಾ ದೇವಿ ಪ್ರಸಾದ್ ಶೆಟ್ಟಿ ಹಾಗೂ ಆರ್​ಎಸ್​ಎಸ್​ ಸರಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ವೃತ್ತಿಪರ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಕೇಂದ್ರದಲ್ಲಿ ಪ್ರಸ್ತುತ 19 ಜನರಲ್ ವಾರ್ಡ್​ಗಳು, 72 ಸೆಮಿ ಪ್ರೈವೇಟ್ ವಾರ್ಡ್, 11 ಎಮರ್ಜೆನ್ಸಿ ವಾರ್ಡ್ ಹಾಗೂ 17 ಪ್ರೈವೇಟ್ ವಾರ್ಡ್​ಗಳು ಸೇರಿದಂತೆ ಒಟ್ಟು 160 ಹಾಸಿಗೆಗಳನ್ನು ಹೊಂದಿರುವ ಸಮಗ್ರ ಆಧುನಿಕ ವೈದ್ಯಕೀಯ ಮೂಲಸೌಕರ್ಯ ಲಭ್ಯವಿದೆ.

ಜನರಲ್ ಮೆಡಿಸಿನ್, ಕಾರ್ಡಿಯಾಲಾಜಿ, ಅರ್ಥೊಪೆಡಿಕ್ಸ್, ನ್ಯೂರಾಲಜಿ, ಗೈನಕಾಲಜಿ, ಗ್ಯಾಸ್ಟ್ರೋಎಂಟರಾಲಜಿ, ಪೀಡಿಯಾಟ್ರಿಕ್ಸ್, ಆಯುರ್ವೇದ, ಹೋಮಿಯೋಪತಿ, ಯೋಗ, ನ್ಯಾಚುರೋಪತಿ, ತುರ್ತು ಚಿಕತ್ಸಾ ಘಟಕ, ಡಯಾಲಿಸಿಸ್, ಓಟಿ, ಐ.ಸಿ.ಯು, ಡಯಾಗ್ನೋಸ್ಟಿಕ್ ಸೇವೆಗಳನ್ನು ಆ ಆಸ್ಪತ್ರೆ ಹೊಂದಿದೆ.

LEAVE A REPLY

Please enter your comment!
Please enter your name here