ಖ್ಯಾತ ಪ್ರವಾಸಿ ತಾಣ ನಂದಿ ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ಬಂದ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ತಿಳಿಸಿದ್ದಾರೆ. ಬೆಂಗಳೂರು: ಖ್ಯಾತ ಪ್ರವಾಸಿ ತಾಣ ನಂದಿ ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ಬಂದ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ತಿಳಿಸಿದ್ದಾರೆ.
ನಂದಿ ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ (New Year 2023) ನಿರ್ಬಂಧ ಹೇರಲಾಗಿದೆ. ನಾಳೆ ಶನಿವಾರ ಡಿಸೆಂಬರ್ 31 ಸಂಜೆ 6 ಗಂಟೆಯಿಂದ ಜನವರಿ 1 ಬೆಳಗ್ಗೆ 6 ಗಂಟೆವರೆಗೂ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ (Chikkaballapur DC) ಎನ್.ಎಂ. ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಬಿಎಂಟಿಸಿ ವಜ್ರ ಬಸ್‌ನ ದೈನಂದಿನ-ಮಾಸಿಕ ಪಾಸ್ ದರ ಶೇ. 20ರಷ್ಟು ಹೆಚ್ಚಳ!
ಇದರಿಂದಾಗಿ ನಂದಿ ಹಿಲ್ಸ್ಗೆ ಸಾರ್ವಜನಿಕರ ಪ್ರವೇಶ ಮತ್ತು ಹೊಸ ವರ್ಷ ನಿಮಿತ್ತ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ಅಂತೆಯೇ ಡ್ರಿಂಕ್ ಆಂಡ್ ಡ್ರೈವ್ ಅಪಘಾತ ಹಾಗೂ ಕೊರೊನಾ (Covid 19) ಹರಡದಂತೆ ತಡೆಯುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಹೊಸ ವರ್ಷಾಚರಣೆ: ನಾಳೆ ತಡರಾತ್ರಿವರೆಗೂ ಸಂಚಾರ ವಿಸ್ತರಿಸಿದ ನಮ್ಮ ಮೆಟ್ರೋ
ಅಲ್ಲದೆ ನಂದಿಗಿರಿಧಾಮದಲ್ಲಿ ಡಿಸೆಂಬರ್ 31ರಂದು ರೂಮ್ ಬುಕಿಂಗ್ ಸಹ ರದ್ದುಪಡಿಸಲಾಗಿದ್ದು, ನಂದಿಗಿರಿಧಾಮದ ಸುತ್ತಮುತ್ತ ಸೂಕ್ತ ಬಂದೋಬಸ್ತ್ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.