ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವಿಶೇಷ ಸ್ವಚ್ಛತಾ ಅಭಿಯಾನ: 80 ಬಸ್ ಶೆಲ್ಟರ್ಗಳ ಸ್ವಚ್ಛತೆ
ಬೆಂಗಳೂರು, ಮಾ. 18: ಬೆಂಗಳೂರು ಕೇಂದ್ರ ನಗರ ಪಾಲಿಕೆ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನದ ಮೊದಲ ದಿನದಲ್ಲಿ 80 ಬಸ್ ಶೆಲ್ಟರ್ಗಳನ್ನು ಶುಚಿಗೊಳಿಸಲಾಗಿದೆ ಎಂದು ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಈ ಅಭಿಯಾನದ ಅಡಿಯಲ್ಲಿ, ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಬಸ್ ಶೆಲ್ಟರ್ಗಳನ್ನು ಸ್ವಚ್ಛಗೊಳಿಸಲಾಗಿದೆ. ಶಾಂತಿನಗರ ಕ್ಷೇತ್ರದಲ್ಲಿ 11, ಸಿ. ವಿ. ರಾಮನ್ ನಗರದಲ್ಲಿ 24, ಗಾಂಧಿನಗರದಲ್ಲಿ 19, ಚಾಮರಾಜಪೇಟೆಯಲ್ಲಿ 12, ಚಿಕ್ಕಪೇಟೆಯಲ್ಲಿ 8 ಮತ್ತು ಶಿವಾಜಿನಗರದಲ್ಲಿ 7 ಬಸ್ ಶೆಲ್ಟರ್ಗಳನ್ನು ಶುಚಿಗೊಳಿಸಲಾಗಿದೆ.
ಈ ಕಾರ್ಯದಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಬಸ್ ತಂಗುದಾಣಗಳಲ್ಲಿ ಕುಳಿತುಕೊಳ್ಳಲು ಅನುಕೂಲವಾಗುತ್ತದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಉದ್ದೇಶವು ಸ್ವಚ್ಛತೆ ಕಾಪಾಡುವುದು ಮತ್ತು ತ್ಯಾಜ್ಯಮುಕ್ತ ನಗರವನ್ನು ರೂಪಿಸುವುದಾಗಿದೆ. 2025-26 ರ ಶ್ರೇಯಾಂಕ ಪಟ್ಟಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸ್ಥಾನ ಪಡೆಯುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದೆ.
