Home Uncategorized ನಾವು ಪಕ್ಷ ಬಿಡಲು ಪ್ರೇರಣೆ ನೀಡಿದ್ದೇ ಸಿದ್ದರಾಮಯ್ಯ-ಡಾ ಸುಧಾಕರ್ ಬಳಿಕ ಮಾಜಿ ಸಚಿವ ಎಸ್ ಟಿ...

ನಾವು ಪಕ್ಷ ಬಿಡಲು ಪ್ರೇರಣೆ ನೀಡಿದ್ದೇ ಸಿದ್ದರಾಮಯ್ಯ-ಡಾ ಸುಧಾಕರ್ ಬಳಿಕ ಮಾಜಿ ಸಚಿವ ಎಸ್ ಟಿ ಸೋಮಶೇಖರ್ ಸ್ಫೋಟಕ ಹೇಳಿಕೆ

32
0

ರಾಜ್ಯದಲ್ಲಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳು ಸಿಕ್ಕಿ ಸರ್ಕಾರ ರಚಿಸಲು ಹೊರಟಿರುವ ಸಂದರ್ಭದಲ್ಲಿ 2019ರಲ್ಲಿ ಕೈ ಪಾಳೆಯ ತೊರೆದು ಹೊರಬಂದ ನಾಯಕರು ಒಬ್ಬೊಬ್ಬರೇ ಈಗ ಸ್ಫೋಟಕ ಹೇಳಿಕೆ ನೀಡುತ್ತಿದ್ದಾರೆ. ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳು ಸಿಕ್ಕಿ ಸರ್ಕಾರ ರಚಿಸಲು ಹೊರಟಿರುವ ಸಂದರ್ಭದಲ್ಲಿ 2019ರಲ್ಲಿ ಕೈ ಪಾಳೆಯ ತೊರೆದು ಹೊರಬಂದ ನಾಯಕರು ಒಬ್ಬೊಬ್ಬರೇ ಈಗ ಸ್ಫೋಟಕ ಹೇಳಿಕೆ ನೀಡುತ್ತಿದ್ದಾರೆ.

2019ರಲ್ಲಿ ಕಾಂಗ್ರೆಸ್ ತೊರೆಯಲು ಸಿದ್ದರಾಮಯ್ಯನವರ ಧೋರಣೆ, ನಾವು ಸಹಾಯ, ಸಹಕಾರ ಕೇಳಲು ಹೋದಾಗ ಅಸಹಾಯಕತೆ ತೋರಿಸುತ್ತಿದ್ದ ಮೈತ್ರಿಕೂಟದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದ ಇಂದು ಮುಖ್ಯಮಂತ್ರಿಯಾಗಲು ಸಿದ್ಧರಾಗಿರುವ ಸಿದ್ದರಾಮಯ್ಯನವರೇ ಕಾರಣ ಎಂದು ಟ್ವೀಟ್ ಮೂಲಕ ಮಾಜಿ ಸಚಿವ ಚಿಕ್ಕಬಳ್ಳಾಪುರದ ಡಾ ಸುಧಾಕರ್ ಬೇಸರ ಹೊರಹಾಕಿದ್ದರು. 

ಅದೇ ವರಸೆಯಲ್ಲಿ ಟ್ವೀಟ್ ಮಾಡಿದ್ದಾರೆ ಮಾಜಿ ಸಚಿವ ಶಾಸಕ ಎಸ್ ಟಿ ಸೋಮಶೇಖರ್. 20180-19ರಲ್ಲಿ ಸಮ್ಮಿಶ್ರ ಸರ್ಕಾರದ ದಿನಗಳಲ್ಲಿ ನಾವು ಶಾಸಕರು ಸಿದ್ದರಾಮಯ್ಯನವರ ಮುಂದೆ ಸಮಸ್ಯೆ ಹೇಳಿಕೊಳ್ಳಲು ಹೋದರೆ ಸಿದ್ದರಾಮಯ್ಯನವರು ಅಸಹಾಯಕತೆ ತೋರಿಸಿಕೊಳ್ಳುತ್ತಿದ್ದರು. ಅವರ ಅಸಹಾಯಕತೆಯೇ ನಾವು ಪಕ್ಷ ಬಿಡಲು ಪ್ರೇರಣೆಯಾಯಿತು ಎಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

Despite being the Chairman of Coordination Committe Shri Sidddaramaiah always expressed his helplessness to address the concerns of MLAs during Cong-JDS coalition government.

No one can deny the truth that this pushed some of us to quit the party and go for bypolls.
— S T Somashekar Gowda (@STSomashekarMLA) May 17, 2023

LEAVE A REPLY

Please enter your comment!
Please enter your name here