ಮೈಸೂರು:
ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದ್ದು, ಫಲಿತಾಂಶವು ವಿಳಂಬ ಕೂಡ ನಿವಾರಣೆಯಾಗುತ್ತಿದೆ. ಚಿಕಿತ್ಸೆಗೆ ಹಾಸಿಗೆ ಕೊರತೆ ಸಹ ಇಲ್ಲ. ಸಾವಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಶುಕ್ರವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೆಸ್ಬುಲಕ್ ಪೇಜ್ ಲೈವ್ನರಲ್ಲಿ ಮಾತನಾಡಿದ ಅವರು, ಕಳೆದ 21 ದಿನದ ಹಿಂದಿನ ಅಂಕಿ ಅಂಶಕ್ಕೆ ಹೋಲಿಸಿದರೆ, ಕೋವಿಡ್ ಸಾವಿನ ಪ್ರಮಾಣ ಶೇ. 2.1 ರಿಂದ 1.5 ಗೆ ಇಳಿದಿದೆ. ಪರೀಕ್ಷೆ ಪ್ರಮಾಣ 2 ಸಾವಿರದಿಂದ 4 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪರಿಸ್ಥಿತಿ ಎಲ್ಲಾ ಆಯಾಮಗಳಲ್ಲಿ ಸುಧಾರಣೆಯಾಗುತ್ತಿದ್ದು, ಸಾರ್ವಜನಿಕರು ಈ ಸಂದರ್ಭದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕಿದೆ ಎಂದರು.
ಪ್ರಸ್ತುತ ಮೈಸೂರಿನಲ್ಲಿ ಎಂಎಂಸಿಆರ್ಐೆ ಹಾಗೂ ಸಿಎಫ್ಟಿತಆರ್ಐಿ ಲ್ಯಾಬ್ನಜಲ್ಲಿ ಪ್ರತಿದಿನ ಸುಮಾರು 1,500 ಪರೀಕ್ಷೆಯಾಗುತ್ತಿದ್ದು, ಉಳಿದ ಸ್ಯಾಂಪಲ್ಗಫಳನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಇದರಿಂದ ಫಲಿತಾಂಶ ಬರುವುದು ವಿಳಂಬವಾಗುತ್ತಿದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಎಲ್ಲಾ ಸ್ಯಾಂಪಲ್ಗರಳ ಪರೀಕ್ಷೆಯನ್ನು ಮೈಸೂರಿನಲ್ಲೆ ಮಾಡಲು ಸರ್ಕಾರ ಲಿಕ್ವಿಡ್ ಹ್ಯಾಂಡ್ಲಿಂಗ್ ಸಿಸ್ಟಮ್ ನೀಡುತ್ತಿದ್ದಾರೆ. ಇದು ಅಕ್ಟೋಬರ್ 27ರ ವೇಳಗೆ ಅನುಷ್ಠಾನವಾಗಲಿದ್ದು, ಆದಾದ ನಂತರ ಎಲ್ಲಾ ಸ್ಯಾಂಪಲ್ಗತಳ ಫಲಿತಾಂಶವು 24 ಗಂಟೆಯಲ್ಲೆ ತಿಳಿಯಲಿದೆ ಎಂದರು.