Home ಕರ್ನಾಟಕ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ; ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಚಾಲಕ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ; ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಚಾಲಕ

22
0

ಹಾಸನ: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ದೊಡ್ಡ ತಿರುವು ದೊರೆತಿದ್ದು, ಈ ಬಗ್ಗೆ ರೇವಣ್ಣ ಕುಟುಂಬದ ಮಾಜಿ ಕಾರು ಚಾಲಕ ಕಾರ್ತಿಕ್ ಎಂಬವರು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

‘ನಾನು ರೇವಣ್ಣ ಹಾಗೂ ಪ್ರಜ್ವಲ್ ಜೊತೆ ಹದಿನೈದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದೆ. ವರ್ಷದ ಹಿಂದೆ ನಾನು ಕೆಲಸ ಬಿಟ್ಟಿದ್ದೇನೆ. ನನ್ನ ಮೇಲೆ ಮಾಡಿದ ದೌರ್ಜನ್ಯ, ನಮ್ಮ ಜಮೀನು ಬರೆಸಿಕೊಂಡಿದ್ದು, ಹೆಂಡತಿ ಮೇಲೆ ಹಲ್ಲೆ ಮಾಡಿದ್ದ ವಿಚಾರವಾಗಿ ನಾನು ಅವರ ಮನೆಯಿಂದ ಹೊರಗೆ ಬಂದೆ ಎಂದು ಹೇಳಿದ್ದಾರೆ.‌

ನಾನು ಅವರ ವಿರುದ್ಧ ಕೇಸ್ ದಾಖಲಿಸಿ ಹೋರಾಟ ಮಾಡುವ ತಯಾರಿಯಲ್ಲಿ ಇದ್ದೆ. ಆಗ ಅವರ ವಿರುದ್ಧ ಹೋರಾಟ ಮಾಡುತ್ತಿದ್ದ ಬಿಜೆಪಿ ಮುಖಂಡ ದೇವರಾಜೇಗೌಡ ಬಗ್ಗೆ ವಿಚಾರ ಗೊತ್ತಾಗಿ ಅವರ ಬಳಿ ಕಷ್ಟ ಹೇಳಿಕೊಂಡಿದ್ದೆ. ಆಗ, ಅವರು ನ್ಯಾಯ ಒದಗಿಸಿ ಕೊಡುವ ಭರವಸೆ ನೀಡಿದ್ದರು. ಆದರೆ, ಅವರು ಕೇಸ್ ತಗೆದುಕೊಳ್ಳಲಿಲ್ಲ. ಹಾಗಾಗಿ ನಾನು ಬೇರೆ ಲಾಯರ್ ಮೂಲಕ ಕೇಸ್ ಹಾಕಿಸಿದೆ. ಆಗ ಮತ್ತೆ ನನ್ನನ್ನು ಕರೆಸಿ, ಕೋರ್ಟ್ ಹೋರಾಟ ಮಾಡಿದರೆ ನಿನಗೆ ನ್ಯಾಯ ಸಿಗಲ್ಲ. ಜನರಿಗೆ ಗೊತ್ತಾಗಬೇಕು ಎಂದರು. ಎಲ್ಲಾ ಮಾದ್ಯಮಗಳ ಎದುರು ಹೇಳಿಕೆ ಕೊಡಿಸಿದರು. ಆಗ ಅವರೇ ನನ್ನ ಜೊತೆ ನಿಂತು ಅವರೇ ಹೇಳಿಕೆ ಕೊಟ್ಟಿದ್ದರು’ ಎಂದು ಕಾರ್ತಿಕ್ ತಿಳಿಸಿದ್ದಾರೆ.

ಇದೆಲ್ಲ ಆದ ಬಳಿಕ ಪ್ರಜ್ವಲ್ ರೇವಣ್ಣ ಯಾವುದೇ ವೀಡಿಯೋ ಬಿಡುಗಡೆ ಮಾಡದಂತೆ ನನ್ನ ವಿರುದ್ಧ ಸ್ಟೇ ತಂದಿದ್ದರು. ಆ ತಡೆಯಾಜ್ಞೆ ಪ್ರತಿಯನ್ನು ತೆಗೆದುಕೊಂಡು ನಾನು ದೇವರಾಜೇಗೌಡ ಬಳಿ ಹೋದೆ. ಆಗ ಅವರು, ನಿನ್ನ ಬಳಿ ಇರುವ ಫೋಟೊ ಹಾಗೂ ವೀಡಿಯೊ ನನಗೆ ಕೊಡು ಎಂದರು. ಯಾರಿಗೂ ತೋರಿಸಲ್ಲ, ಜಡ್ಜ್ ಮುಂದೆ ಪ್ರಸ್ತುತಪಡಿಸುತ್ತೇನೆ. ತಡೆಯಾಜ್ಞೆ ತೆರವು ಮಾಡಿಸಿಕೊಡುತ್ತೇನೆ ಎಂದಿದ್ದರು. ಅವರನ್ನು ನಂಬಿ ನನ್ನ ಬಳಿ ಇದ್ದ ಒಂದು ಕಾಪಿಯನ್ನು ಅವರಿಗೆ ಕೊಟ್ಟಿದ್ದೆ. ಅದನ್ನು ಅವರು ಸ್ವಾರ್ಥಕ್ಕೆ ಬಳಸಿಕೊಂಡರು ಎಂದು ಕಾರ್ತಿಕ್ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here