Home ಕರ್ನಾಟಕ ಮೇ 3ರಂದು ಯುನಿವೆಫ್ ನಿಂದ ಹಜ್ ತರಬೇತಿ ಶಿಬಿರ

ಮೇ 3ರಂದು ಯುನಿವೆಫ್ ನಿಂದ ಹಜ್ ತರಬೇತಿ ಶಿಬಿರ

1
0

ಮಂಗಳೂರು, ಎ.30: ಯುನಿವೆಫ಼್ ಕರ್ನಾಟಕ ಇದರ ದ.ಕ. ಘಟಕದ ವತಿಯಿಂದ ಹಜ್ ಪ್ರಾಯೋಗಿಕ ತರಬೇತಿ ಶಿಬಿರವನ್ನು ಮೇ 3ರಂದು ಅಪರಾಹ್ನ 3:30ಕ್ಕೆ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ ನಲ್ಲಿ ಆಯೋಜಿಸಲಾಗಿದೆ ಯುನಿವೆಫ಼್ ಕರ್ನಾಟಕ ಅಧ್ಯಕ್ಷ ಮತ್ತು ಉಳ್ಳಾಲ ನಿಮ್ರಾ ಮಸೀದಿಯ ಖತೀಬ್ ರಫೀಉದ್ದೀನ್ ಕುದ್ರೋಳಿ ಹಜ್ ಮತ್ತು ಉಮ್ರಾ ದ ವಿಧಿವಿಧಾನಗಳ ಬಗ್ಗೆ ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆ ಸಹಿತ ತರಬೇತಿ ನೀಡಲಿದ್ದಾರೆ. ಹಜ್ ಕರ್ಮದ ಬಗ್ಗೆ ಹಾಜಿಗಳ ಸಂಶಯಗಳಿಗೆ ಸೂಕ್ತ ಮಾಹಿತಿ ಒದಗಿಸಲಿದ್ದಾರೆ.

ಹಜ್ ಕರ್ಮದ ವಿವಿಧ ಆಯಾಮಗಳ ಛಾಯಾಚಿತ್ರ ಪ್ರದರ್ಶನವನ್ನು ಕೂಡಾ ಈ ಸಂದರ್ಭದಲ್ಲಿ ಏರ್ಪಡಿಸಲಾಗುವುದು. ಹೆಚ್ವಿನ ಮಾಹಿತಿಗೆ ಮೊಬೈಲ್ ಸಂ. 8310598907ಯನ್ನು ಸಂಪರ್ಕಿಸುವಂತೆ ಸಂಚಾಲಕ ನೌಫಲ್ ಹಸನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here