Home Uncategorized ಬೆಂಗಳೂರಿನ ತುರಹಳ್ಳಿಯಲ್ಲಿ ಒಂದಲ್ಲ ನಾಲ್ಕು ಚಿರತೆಗಳಿವೆ: ಜರನಲ್ಲಿ ಹೆಚ್ಚಿದ ಆತಂಕ

ಬೆಂಗಳೂರಿನ ತುರಹಳ್ಳಿಯಲ್ಲಿ ಒಂದಲ್ಲ ನಾಲ್ಕು ಚಿರತೆಗಳಿವೆ: ಜರನಲ್ಲಿ ಹೆಚ್ಚಿದ ಆತಂಕ

35
0

ಬೆಂಗಳೂರು: ನಗರದ ತುರಹಳ್ಳಿ (Turahalli) ಅರಣ್ಯ ಪ್ರದೇಶದ ಬಳಿ ಚರಿತೆ ಪ್ರತ್ಯಕ್ಷ (Leopard Spottled)ಗೊಂಡಿದ್ದಲ್ಲದೆ, ಜಿಂಕೆಯನ್ನು ಬೇಟೆಯಾಡಿದ್ದನ್ನು ಕಂಡ ಜನರು ಚಿರತೆ ಸೆರೆಗೆ ಆಗ್ರಹಿಸುತ್ತಿದ್ದಾರೆ. ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ (Forest Department), ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ. ಆದರೆ ಚಿತಾ ಸೆರೆ ಕಾರ್ಯಾಚರಣೆ ಆರಂಭಿಸಿ 48 ಗಂಟೆ ಕಳೆದರೂ ಚಿರತೆ ಇದುವೆರೆಗೆ ಯಾರ ಕಣ್ಣಿಗೂ ಬೀಳದೆ ತಪ್ಪಿಸಿಕೊಂಡಿದೆ. ಇದು ಸಹಜವಾಗಿ ಜನರಲ್ಲಿನ ಭೀತಿಯನ್ನು ಹೆಚ್ಚಿಸಿದ್ದು, ಭೀತಿಯಲ್ಲೇ ಶಾಲಾ-ಕಾಲೇಜು, ಕೆಲಸ ಕಾರ್ಯಗಳಿಗೆ ಜನರು ಹೋಗುತ್ತಿದ್ದಾರೆ. ಈ ನಡುವೆ ಸ್ಥಳೀಯರು ಒಂದಲ್ಲ ನಾಲ್ಕು ಚಿರತೆಗಳಿವೆ ಎಂದು ಹೇಳಿದ್ದಾರೆ. ಹೀಗಾಗಿ ವಾಕಿಂಗ್​, ಜಾಗಿಂಗ್​ಗೆ ತುರಹಳ್ಳಿ ಅರಣ್ಯದ ಕಡೆಗೆ ಸುಳಿಯುತ್ತಿಲ್ಲ. ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿ ಚಿರತೆ ಸೆರೆಹಿಡಿದು ಭೀತಿಯಿಂದ ಮುಕ್ತಿಗೊಳಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಚಿರತೆಯ ಹೆಜ್ಜೆ ಜಾಡು ಹಿಡಿದು ಹೊರಟ ಸಿಬ್ಬಂದಿಗಳು

ಜನರಲ್ಲಿ ಆತಂಕ ಹುಟ್ಟಿಸಿದ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಅಖಾಡಕ್ಕಿಳಿದಿದ್ದಾರೆ. ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಸಿಬ್ಬಂದಿ ತುರಹಳ್ಳಿ ಕಾಡಿಗೆ ಎಂಟ್ರಿ ಕೊಟ್ಟಿದ್ದು, ಚಿರತೆಯ ಹೆಜ್ಜೆ ಜಾಡು ಹಿಡಿದು ಕಾಡಿನ ಸುತ್ತಮುತ್ತ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಜನರ ನಿದ್ದೆಗೆಡಿಸಿದ ಚಿರತೆ ದಾಳಿ; ಶಾಲಾ ಕಾಲೇಜುಗಳಿಗಿಲ್ಲ ರಜೆ, ಇಂದು ಸಹ‌ ಮುಂದುವರೆಯಲಿರುವ ಚೀತಾ ಕೂಂಬಿಂಗ್

ಚಿರತೆ ಸೆರೆಗಾಗಿ 4 ಕಡೆ ಬೋನ್ ಇಟ್ಟ ಸಿಬ್ಬಂದಿ

ಮೈಸೂರು: ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಚಿರತೆಗಳನ್ನು ಸೆರೆಹಿಡಿದು ಬಂಡೀಪುರ ನಾಗರಹೊಳೆ ಅಭಯಾರಣ್ಯಕ್ಕೆ ರವನೆ ಮಾಡಲಾಗಿತ್ತು. ಆದರೂ ಚಿರತೆ ಆತಂಕ ಮುಂದುವರಿದಿದೆ. ಟಿ.ನರಸೀಪುರ ನಂತರ ಇದೀಗ ಮೈಸೂರು ತಾಲೂಕಿನಲ್ಲೂ ಚಿರತೆ ಭೀತಿ ಉಂಟಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ 4 ಕಡೆಗಳಲ್ಲಿ ಬೋನ್​ಗಳನ್ನು ಇಟ್ಟಿದ್ದಾರೆ ಎಂದು ಟಿವಿ9ಗೆ ಡೆಪ್ಯುಟಿ ಆರ್​ಎಫ್​​ಒ ವಿಜಯ ಕುಮಾರ್ ಮಾಹಿತಿ ನೀಡಿದ್ದಾರೆ. ಸಜ್ಜೇ ಹುಂಡಿ, ಮಾರಶೆಟ್ಟಹಳ್ಳಿ, ಕೂಡನಹಳ್ಳಿ, ತುಗರಿ ಮಾದಯ್ಯನ ಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷಗೊಂಡ ಹಿನ್ನೆಲೆ ನಾಲ್ಕೂ ಗ್ರಾಮಗಳ ಕಾಡಂಚಿನ ಜಮೀನುಗಳಲ್ಲಿ ಬೋನುಗಳನ್ನು ಇರಿಸಲಾಗಿದೆ.

Leopard Attack ಚಿರತೆ ದಾಳಿಗೊಳಗಾಗಿದ್ದ ಯುವತಿ ಸಾವು, ಟಿ. ನರಸೀಪುರ ತಾಲೂಕಿನಲ್ಲೇ ಇದು 2ನೇ ಬಲಿ

ತಿಂಗಳಾದರೂ ಕಣ್ಣಿಗೆ ಕಾಣಿಸದ ಚಿರತೆ

ಮಂಡ್ಯ: ಮನೆ ಮುಂದೆ ಮಲಗಿದ್ದ ಶ್ವಾನದ ಮೇಲೆ ದಾಳಿ ನಡೆಸಿದ್ದ ಚಿರತೆ ಒಂದು ತಿಂಗಳು ಕಳೆದರೂ ಯಾರ ಕಣ್ಣಿಗೂ ಬಿದ್ದಿಲ್ಲ. ಮಳವಳ್ಳಿ ತಾಲೂಕಿನ ದನಗೂರು ಫಾರ್ಮ್ ಹೌಸ್​ನಲ್ಲಿ ಶ್ವಾನದ ಮೇಲಿನ ಚಿರತೆ ದಾಳಿಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ 15 ದಿನಗಳ ಹಿಂದೆ ನಡೆದ ಈ ಘಟನೆಯಲ್ಲಿ ಚಿರತೆ ದಾಳಿಯಿಂದ ಕೂದಲೆಳೆ ಅಂತದಲ್ಲಿ ಶ್ವಾನ ಪ್ರಾಣಾಪಾಯದಿಂದ ಪಾರಾಗಿತ್ತು.

ಸಾಕುನಾಯಿ ಮೇಲೆ ಚಿರತೆ ದಾಳಿ ನಡೆಸಿದ ಬಗ್ಗೆ ಮಾಲೀಕ ಮಿಥುನ್ ಅವರು ಅರಣ್ಯಾಧಿಕಾರಿಗೆ ದೂರು ನೀಡಿದ್ದು, ನೆಪ ಮಾತ್ರಕ್ಕೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರು. ಸಿಬ್ಬಂದಿಗಳು ಎಷ್ಟೇ ಶೋಧ ನಡೆಸಿದರೂ ಇದುವರೆಗೆ ಚಿರತೆ ಮಾತ್ರ ಪತ್ತೆಯಾಗಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಿರತೆ ದಾಳಿಯ ವಿಡಿಯೋ ವೈರಲ್ ಆಗುತ್ತಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here