Home Uncategorized ಅಮೆರಿಕ: ಹೈಸ್ಕೂಲ್ ನಲ್ಲಿ ಶೂಟೌಟ್, ಒಬ್ಬ ವಿದ್ಯಾರ್ಥಿ ಮೃತ್ಯು; 5 ಮಂದಿಗೆ ಗಾಯ

ಅಮೆರಿಕ: ಹೈಸ್ಕೂಲ್ ನಲ್ಲಿ ಶೂಟೌಟ್, ಒಬ್ಬ ವಿದ್ಯಾರ್ಥಿ ಮೃತ್ಯು; 5 ಮಂದಿಗೆ ಗಾಯ

8
0

ನ್ಯೂಯಾರ್ಕ್: ಅಮೆರಿಕದ ಲೋವ ರಾಜ್ಯದ `ಪೆರ್ರಿ ಹೈಸ್ಕೂಲ್’ನಲ್ಲಿ ವಿದ್ಯಾರ್ಥಿಯೊಬ್ಬ ಮನಬಂದಂತೆ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ವಿದ್ಯಾರ್ಥಿ ಮೃತಪಪಟ್ಟಿದ್ದು ಇತರ 5 ಮಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದ ಆರೋಪಿ ಬಳಿಕ ಸ್ವಯಂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಕ್ರಿಸ್ಮಸ್ ಮತ್ತು ಹೊಸವರ್ಷದ ರಜೆ ಮುಗಿದು ಶಾಲೆ ಆರಂಭಗೊಂಡ ಮೊದಲ ದಿನವೇ ಈ ದುರಂತ ನಡೆದಿದೆ. ಆರೋಪಿಯನ್ನು 17 ವರ್ಷದ ಡಿಲಾನ್ ಬಟ್ಲರ್ ಎಂದು ಗುರುತಿಸಲಾಗಿದ್ದು ಗುಂಡಿನ ದಾಳಿ ನಡೆದಾಗ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿರಲಿಲ್ಲ. ಹೈಸ್ಕೂಲ್ನ ಪ್ರಾಂಶುಪಾಲ ಡ್ಯಾನ್ ಮರ್ಬರ್ಗರ್ ಸಹಿತ 5 ಮಂದಿ ಗಾಯಗೊಂಡಿದ್ದು ಓರ್ವ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ ಎಂದು ಲೋವಾ ರಾಜ್ಯದ ಸಾರ್ವಜನಿಕ ಸುರಕ್ಷಾ ವಿಭಾಗದ ಸಹಾಯಕ ನಿರ್ದೇಶಕ ಮಿಚ್ ಮೊಟ್ವೆಡ್ ಹೇಳಿದ್ದಾರೆ. ಗುಂಡಿನ ದಾಳಿ ನಡೆಸುವುದಕ್ಕೂ ಮುನ್ನ ಆರೋಪಿ ತನ್ನ ಟಿಕ್ಟಾಕ್ ವೀಡಿಯೊವನ್ನು ಶೇರ್ ಮಾಡಿದ್ದು `ನಾವು ಈಗ ಕಾಯುತ್ತಿದ್ದೇವೆ’ ಎಂಬ ಶೀರ್ಷಿಕೆ ನೀಡಿದ್ದಾನೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

LEAVE A REPLY

Please enter your comment!
Please enter your name here