Home Uncategorized ಬೆಂಗಳೂರು ಡ್ರಗ್ಸ್​ ಕೇಸ್: ನಟಿ ರಕುಲ್ ಪ್ರೀತ್ ಸಿಂಗ್, ಟಿಆರ್​ಎಸ್ ಶಾಸಕ ರೋಹಿತ್ ರೆಡ್ಡಿಗೆ ಇಡಿ...

ಬೆಂಗಳೂರು ಡ್ರಗ್ಸ್​ ಕೇಸ್: ನಟಿ ರಕುಲ್ ಪ್ರೀತ್ ಸಿಂಗ್, ಟಿಆರ್​ಎಸ್ ಶಾಸಕ ರೋಹಿತ್ ರೆಡ್ಡಿಗೆ ಇಡಿ ನೋಟಿಸ್

23
0

ಹೈದರಾಬಾದ್/ಬೆಂಗಳೂರು: ಬೆಂಗಳೂರಿನ ಗೋವಿಂದಪುರ ಠಾಣಾಯಲ್ಲಿ ದಾಖಲಾಗಿರುವ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಬಿಆರ್‌ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿ ಹಾಗೂ ನಟಿ ರಕುಲ್ ಪ್ರೀತ್ ಸಿಂಗ್​ಗೆ(Rakul Preet Singh) ಜಾರಿ ನಿರ್ದೇಶನಾಲಯ(Enforcement Directorate)ಇಂದು(ಡಿಸೆ.16) ನೋಟಿಸ್ ನೀಡಿದ್ದು, ಡಿಸೆಂಬರ್ 19ರಂದು ವಿಚಾರಣೆಗೆ ಹೈದರಾಬಾದ್​​ನ ಇಡಿ ಕಚೇರಿಗೆ  ಹಾಜರಾಗುವಂತೆ ಸೂಚಿಸಿದೆ.

2021 ರಲ್ಲಿ ಬೆಂಗಳೂರಿನ ಗೋವಿಂದಪುರ ಪೊಲೀಸರು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನಲ್ಲಿ ಉದ್ಯಮಿ ಕಲಹರ್ ರೆಡ್ಡಿ ಜೊತೆಗೆ ಚಲನಚಿತ್ರ ನಿರ್ಮಾಪಕ ಶಂಕರ್ ಗೌಡ ಆಯೋಜಿಸಿದ್ದ ಪಾರ್ಟಿಯಲ್ಲಿ 4 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದರು. ಅಲ್ಲದೇ ಡ್ರಗ್ಸ್ ಸೇವಿಸಿದ್ದ ಶಂಕರಗೌಡನನ್ನು ಬಂಧಿಸಿದ್ದರು. ಜೊತೆಗೆ. ನಟ ತನಿಶ್ ಅವರನ್ನೂ ಬೆಂಗಳೂರು ಪೊಲೀಸರು ವಿಚಾರಣೆ ನಡೆಸಿದ್ದರು. ಈ ಪಾರ್ಟಿಯಲ್ಲಿ ಬಿಆರ್‌ಎಸ್ ಶಾಸಕ ರೋಹಿತ್ ರೆಡ್ಡಿ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಇಡಿ ಶಾಸಕ ರೋಹಿತ್ ರೆಡ್ಡಿಗೂ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. ಇವರ ಜೊತೆಗೆ ನಟಿ ರಾಕುಲ್ ಪ್ರೀತ್​ ಸಿಂಗ್​ಗೂ ಇಡಿ ನೋಟಿಸ್​ ಜಾರಿ ಮಾಡಿದೆ.

ಇನ್ನು ಈ ಬಗ್ಗೆ ಟಿವಿ9 ತೆಲುಗು ಜೊತೆ ಮಾತನಾಡಿದ ಶಾಸಕ ರೆಡ್ಡಿ, ತಮಗೆ ಇಡಿ ನೋಟಿಸ್ ಬಂದಿರುವುದನ್ನು ಖಚಿತಪಡಿಸಿದ್ದಾರೆ. ಆದ್ರೆ, ನೋಟಿಸ್‌ನಲ್ಲಿ ಪ್ರಕರಣದ ವಿವರಗಳನ್ನು ನೀಡಿಲ್ಲ. ಆಧಾರ್ ಮತ್ತು ವೋಟರ್ ಐಡಿ ಸೇರಿದಂತೆ ಹಣಕಾಸಿನ ವಹಿವಾಟಿನ ದಾಖಲೆಗಳನ್ನು ತರಲು ಹೇಳಿದ್ದಾರೆ. ಪ್ರಕರಣದ ವಿವರಗಳಿಲ್ಲದೆ ನೋಟಿಸ್‌ಗಳನ್ನು ನೀಡಲಾಗಿದ್ದು, ನೋಟಿಸ್‌ಗಳಿಗೆ ಉತ್ತರಿಸುವ ಮುನ್ನ ನನ್ನ ಕಾನೂನು ತಂಡದೊಂದಿಗೆ ಸಮಾಲೋಚಿಸುತ್ತೇನೆ ಎಂದು ಹೇಳಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here