Home Uncategorized ಮೊಟ್ಟೆ ಒಡೆದು ಹೊರಬಂದ ಹನ್ನೊಂದು ಹಾವಿನ ಮರಿಗಳು

ಮೊಟ್ಟೆ ಒಡೆದು ಹೊರಬಂದ ಹನ್ನೊಂದು ಹಾವಿನ ಮರಿಗಳು

5
0
Advertisement
bengaluru

ನೆಲಮಂಗಲ: ಉರಗತಜ್ಞ ಸ್ನೇಕ್ ನಾಗೇಂದ್ರ ಅವರು ರಕ್ಷಣೆ ಮಾಡಿ ಸಂರಕ್ಷಿಸಿದ್ದ ಕೇರೆ ಹಾವಿನ ಮೊಟ್ಟೆ (Rat snake egg)ಗಳಿಂದ ಹನ್ನೊಂದು ಮರಿಗಳು (Rat snake cubs) ಹೊರಬಂದಿವೆ. ಬೆಂಗಳೂರು ಉತ್ತರ ತಾಲೂಕು ಕುದುರಗೆರೆಯಲ್ಲಿ ಹಾವು ಮರಿಗಳ ಜನನವಾಗಿದೆ. ತೋಟವೊಂದರಲ್ಲಿ 76 ದಿನಗಳ ಹಿಂದೆ ಕೇರೆ ಹಾವನ್ನು ರಕ್ಷಣೆ (Rat snake rescue) ಮಾಡಿ ಬೆಂಗಳೂರು ಉತ್ತರ ತಾಲೂಕು ಕುದುರಗೆರೆಯಲ್ಲಿ ಇರಿಸಿದ್ದರು. ರಕ್ಷಣೆಯ ಮರುದಿನ ಆ ಹಾವು 11 ಮೊಟ್ಟೆಗಳನ್ನು ಇಟ್ಟಿತ್ತು. ಅದರಂತೆ 75 ದಿನಗಳಿಂದ ಮೊಟ್ಟೆಗಳನ್ನು ನಿಯಮಿತ ಶೀತ ಹಾಗೂ ಉಷ್ಣದ ವಾತಾವರಣದಲ್ಲಿ ಸಂರಕ್ಷಣೆ ಮಾಡಲಾಗಿತ್ತು. ಇದೀಗ ಮೊಟ್ಟೆಯಿಂದ ಮರಿಗಳು ಹೊರಬಂದಿವೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


bengaluru

LEAVE A REPLY

Please enter your comment!
Please enter your name here