Home Uncategorized ಬೇಸಿಗೆ ರಜೆಯಲ್ಲಿ ಬಂದ ಚುನಾವಣೆ: ಆತಿಥ್ಯ ವಲಯದ ಮೇಲೆ ಪರಿಣಾಮ ಸಾಧ್ಯತೆ

ಬೇಸಿಗೆ ರಜೆಯಲ್ಲಿ ಬಂದ ಚುನಾವಣೆ: ಆತಿಥ್ಯ ವಲಯದ ಮೇಲೆ ಪರಿಣಾಮ ಸಾಧ್ಯತೆ

11
0

ಬೇಸಿಗೆ ರಜೆ ಬಂತೆಂದರೆ ಸಾಮಾನ್ಯವಾಗಿ ಜನರು ಪ್ರವಾಸಿ ತಾಣಗಳತ್ತ ಮುಖ ಮಾಡುವುದು ಸಾಮಾನ್ಯ. ಆದರೆ, ಈ ಬಾರಿ ರಾಜ್ಯದಲ್ಲಿ ಬೇಸಿಗೆ ಸಮಯದಲ್ಲಿ ಚುನಾವಣೆ ಎದುರಾಗಿದ್ದು, ಇದು ಆತಿಥ್ಯ ವಲಯದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಮೈಸೂರು: ಬೇಸಿಗೆ ರಜೆ ಬಂತೆಂದರೆ ಸಾಮಾನ್ಯವಾಗಿ ಜನರು ಪ್ರವಾಸಿ ತಾಣಗಳತ್ತ ಮುಖ ಮಾಡುವುದು ಸಾಮಾನ್ಯ. ಆದರೆ, ಈ ಬಾರಿ ರಾಜ್ಯದಲ್ಲಿ ಬೇಸಿಗೆ ಸಮಯದಲ್ಲಿ ಚುನಾವಣೆ ಎದುರಾಗಿದ್ದು, ಇದು ಆತಿಥ್ಯ ವಲಯದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಒನ್ ಸ್ಟೇಟ್ ಮೆನಿ ವರ್ಲ್ಡ್ಸ್ ಎಂಬ ಅಡಿಬರಹದೊಂದಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಇತ್ತೀಚಿನ ವರ್ಷಗಳಲ್ಲಿ ಎಂಟು ಮಿಲಿಯನ್‌ಗಿಂತಲೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದೆ. ಈ ಮೂಲಕ ಆತಿಥ್ಯ ಉದ್ಯಮಕ್ಕೆ ನೇರವಾಗಿ ಕೊಡುಗೆ ನೀಡಿದೆ. ದಸರಾ ಮತ್ತು ಇತರೆ ಉತ್ಸವಗಳು ಕೂಡ ಪ್ರವಾಸಿಗರನ್ನು ರಾಜ್ಯದತ್ತ ಸೆಳೆದಿವೆ.

ಮೈಸೂರು, ಹಂಪಿ, ಬೇಲೂರು, ಬಾದಾಮಿ, ಕಬಿನಿ, ನಂದಿ ಬೆಟ್ಟ, ಕೊಡಗು ಮುಂತಾದ ಹಲವಾರು ಸ್ಥಳಗಳು, ಬೀಜ್ ಗಳು ರಾಜ್ಯದಲ್ಲಿದ್ದು, ಇವು ಪ್ರವಾಸಿಗರ ಗಮನ ಸೆಳೆಯುತ್ತಿದೆ. ಸಾಂಕ್ರಾಮಿಕ ರೋಗದಿಂದ ಬಿದ್ದ ಹೊಡೆತದಿಂದ ಈಗಲೂ ಈ ಉದ್ಯಂತ ಚೇತರಿಸಿಕೊಂಡಿಲ್ಲ. ಇದೀಗ ಬೇಸಿಗೆ ಸಮಯದಲ್ಲಿ ಕೊಂಚ ಆದಾಯ ಮಾಡಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಆತಿಥ್ಯ ಉದ್ಯಮಕ್ಕೆ ಚುನಾವಣೆಗಳು ಹೊಡೆತ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ನೀತಿ ಸಂಹಿತೆ ಜಾರಿಯಿಂದಾಗಿ ಎಲ್ಲೆಡೆ ವಾಹನಗಳ ತಪಾಸಣೆಗಲನ್ನು ಕಟುನಿಟ್ಟಾಗಿ ನಡೆಸಲಾಗುತ್ತಿದ್ದು, ಸಂಚಾರ ದಟ್ಟಣೆ ಎದುರಾಗುತ್ತಿದೆ. ಈಗಾಗಲೇ ಹಲವೆಡೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಹೀಗಾಗಿ ಜನರು ರಾಜ್ಯದ ಬದಲು ಇತರೆ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮಾತನಾಡಿ, ಬೇಸಿಗೆ ಸಮಯದಲ್ಲಿ ಸಾಮನ್ಯವಾಗಿ ಆಕ್ಯುಪೆನ್ಸಿ ಶೇ.50ಕ್ಕಿಂತ ಹೆಚ್ಚಿರುತ್ತಿತ್ತು. ಮೈಸೂರಿಗೆ ಏಪ್ರಿಲ್ 10 ಮತ್ತು ಜೂನ್ 10 ರ ನಡುವೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಿದ್ದರು. ಆದರೆ, ಚುನಾವಣೆಯಿಂದಾಗಿ ಪ್ರವಾಸಿಗರು ತಮ್ಮ ಯೋಜನೆಗಳನ್ನು ಬದಲಾಯಿಸಿಕೊಂಡು ಪ್ರವಾಸಗಳನ್ನು ರದ್ದು ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಟ್ರಾವೆಲ್ ಏಜೆಂಟ್ ಲೋಕೇಶ್ ಮಾತನಾಡಿ, ರಾಜಕೀಯ ಪಕ್ಷಗಳ ಚನಾವಣಾ ಪ್ರಚಾರ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಈ ವೇಳೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಗಳಿವೆ. ಇದರಿಂದ ಕೇರಳ ಮತ್ತು ತಮಿಳುನಾಡಿಗೆ ಲಾಭವಾಗಲಿದೆ. ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದರೆ ಕರಕುಶಲ ಮಾರಾಟಗಾರರಿಗೂ ಸಂಕಷ್ಟ ಎದುರಾಗಲಿದೆ ಎಂದು ಹೇಳಿದ್ದಾರೆ.

ಮೇ 13 ರೊಳಗೆ ಚುನಾವಣೆಗಳು ಮತ್ತು ಫಲಿತಾಂಶಗಳು ಮುಗಿಯಲಿದ್ದು, ಪರಿಸ್ಥಿತಿಗಳು ಮರಳಿ ಸಾಮಾನ್ಯಕ್ಕೆ ಬರಲು ಕನಿಷ್ಠ 2 ವಾರಗಳ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here