ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿ.ಪಂ , ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೆಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ದ.ಕ ಜಿಲ್ಲೆ ಇದರ ಜಂಟಿ ಸಹಯೋಗದಲ್ಲಿ ‘ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಭಾಗೀದಾರರಿಗೆ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ರಕ್ಷಣಾ ಕಾಯಿದೆಗಳು ಹಾಗೂ ‘ಮಗಳನ್ನು ಉಳಿಸಿ ,ಮಗಳನ್ನು ಓದಿಸಿ’ ಕಾರ್ಯಕ್ರಮದಡಿ ಒಂದು ದಿನದ ಅರಿವು ಕಾರ್ಯಾಗಾರ ಶುಕ್ರವಾರ ಜಿ.ಪಂ ನೇತ್ರಾವತಿ ಸಭಾಂಗಣ ನಡೆಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭ ಬಿ.ಜಿ, ಐಜಿಪಿ ತರಬೇತಿ ಕಚೇರಿ ಪೊಲೀಸ್ ತರಬೇತಿ ರೋಹಿತ್ ಸಿ.ಜಿ, ದ.ಕ.ಜಿ.ಪಂ ಸಿಇಒ ಡಾ. ಕೆ ಆನಂದ್, ಮುಖ್ಯ ಕಾರ್ಯನಿರ್ವಹಣಾಧಿಕರಿಗಳು, ಜಿಲ್ಲಾ ಪಂಚಾಯತ್ ದ.ಕ ಜಿಲ್ಲೆ, ಯುನಿಸೆಫ್ ಸಂಪನ್ಮೂಲ ವ್ಯಕ್ತಿ ಹರೀಶ್ ಜೋಗಿ, ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಭಾಗವಹಿಸಿದ್ದರು.
ಮಕ್ಕಳ ಹಕ್ಕುಗಳು ಮತ್ತು ರಕ್ಷಣಾ ವ್ಯವಸ್ಥೆಯ ಪ್ರಚಾರಕ್ಕಾಗಿ ಪಡಿ ಸಂಸ್ಥೆ ಮಂಗಳೂರು ತಯಾರಿಸಿದ ಮಕ್ಕಳ ಹಕ್ಕುಗಳ ಕ್ಯಾಲೆಂಡರ್ 2024ನ್ನು ಬಿಡುಗಡೆಗೊಳಿಸಲಾಯಿತು.