Home Uncategorized ಯಡಿಯೂರಪ್ಪರಿಂದ 10 ಕೋಟಿ ರೂ ವಸೂಲಿ: ಅಧಿವೇಶನದಲ್ಲಿ ವಚನಾನಂದ ಸ್ವಾಮಿ ಬಣ್ಣ ಬಯಲು ಮಾಡುತ್ತೇನೆ ಎಂದ...

ಯಡಿಯೂರಪ್ಪರಿಂದ 10 ಕೋಟಿ ರೂ ವಸೂಲಿ: ಅಧಿವೇಶನದಲ್ಲಿ ವಚನಾನಂದ ಸ್ವಾಮಿ ಬಣ್ಣ ಬಯಲು ಮಾಡುತ್ತೇನೆ ಎಂದ ಯತ್ನಾಳ್

32
0

ವಿಜಯಪುರ: ಹರಿಹರ ಪೀಠದ ವಚನಾನಂದ ಸ್ವಾಮಿ (Vachanananda Swamiji) ಮಠದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುವುದಾಗಿ ಯಡಿಯೂರಪ್ಪ (Yediyurappa) ರಿಂದ 10 ಕೋಟಿ ರೂ. ವಸೂಲಿ ಮಾಡಿದ್ದಾರೆ. ಮಠದ ಹಣದ ವಿಚಾರದಲ್ಲಿ ಬಹಳ ಅವ್ಯವಹಾರ ನಡೆದಿದ್ದು, ಅಧಿವೇಶನದಲ್ಲಿ ಈ ಕುರಿತು ಚರ್ಚಿಸುತ್ತೇನೆ. ಮುಂದಿನ ದಿನದಲ್ಲಿ ವಚನಾನಂದ ಸ್ವಾಮಿ ಬಣ್ಣ ಬಯಲು ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮಾಡಿದರು. ನಗರದಲ್ಲಿ ಅವರು ಮಾತನಾಡಿ, ಹರಿಹರ ಪೀಠದ ವಚನಾನಂದ ಸ್ವಾಮಿ ಬ್ರೋಕರ್ ಆಗಿದ್ದಾರೆ. ಮಂತ್ರಿ ಸ್ಥಾನ ಕೊಡಿಸುವುದಾಗಿ ಹಣ ಕೇಳುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ಮಾಡಿದ್ದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಯಾವ ಮಠ ಕಟ್ಟಿದ್ದಾರೆ, ಯಾಕೆ ಕಟ್ಟಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಯಾರು ಮಠ ಕಟ್ಟಿದ್ದರು, ಯಾರು ಬೆನ್ನಿಗೇ ಚೂರು ಹಾಕಿದರು ಎಲ್ಲವೂ ಗೊತ್ತಿದೆ. ಯಾವ ಕಾರಣಕ್ಕೆ ಮಠ ಕಟ್ಟಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ. ಮಠ ಕಟ್ಟಿದ್ದು ಸಮಾಜದ ಉದ್ದಾರಕ್ಕಲ್ಲ, ಮಂತ್ರಿ ಸ್ಥಾನಕ್ಕಾಗಿ.
ಮುಂದಿನ ದಿನಗಳಲ್ಲಿ ಜನರೇ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಇದನ್ನೂ ಓದಿ: ಕುಕ್ಕರ್​ ಬಾಂಬ್​ ಸ್ಫೋಟದ ಹಿಂದೆ ದೇವಸ್ಥಾನಗಳನ್ನು ನಾಶ ಮಾಡುವ ಹುನ್ನಾರವಿದೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​

ಇನ್ನು ಯತ್ನಾಳ್-ಎಂ.ಬಿ.ಪಾಟೀಲ್ ಒಳ ಒಪ್ಪಂದ ರಾಜಕೀಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್​​ ಪಕ್ಷದಲ್ಲಿ ಎಂ.ಬಿ.ಪಾಟೀಲ್ ಮಾತನಾಡಬೇಕಾಗುತ್ತದೆ. ಅವರಿಗೆ ನನ್ನನ್ನು ಸೋಲಿಸಬೇಕು ಅಂತಾ ಹೇಳಿದ್ದಾರೆ. ಎಂ.ಬಿ.ಪಾಟೀಲ್ ಕಾಂಗ್ರೆಸ್​ನಲ್ಲಿದ್ದಾರೆ, ನಾನು ಬಿಜೆಪಿಯಲ್ಲಿದ್ದೇನೆ. 10 ಜನ ಎಂ.ಬಿ.ಪಾಟೀಲ್ ಬಂದರೂ ಸೋಲಿಸಲು ಸಾಧ್ಯವಿಲ್ಲ. ನನ್ನನ್ನು ಸೋಲಿಸುವುದು ಎಂ.ಬಿ.ಪಾಟೀಲ್ ಅಲ್ಲ ಎಂದು ಯತ್ನಾಳ್ ಕಿಡಿಕಾರಿದರು. ವಿಜಯಪುರ ಕ್ಷೇತ್ರದ ಜನರು ಅದನ್ನು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು. ಇನ್ನು ‘ಯತ್ನಾಳ್-ಎಂ.ಬಿ.ಪಾಟೀಲ್ ಒಂದೇ ನಾಣ್ಯದ ಎರಡು ಮುಖ’ ಇತ್ತೀಚಿಗೆ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಆರೋಪಿಸಿದ್ದರು.

ಇದನ್ನೂ ಓದಿ: ಕೇವಲ ಬಾಯಿ ಮಾತಲ್ಲಿ ಕಠಿಣ ಕ್ರಮ ಎಂದು ಹೇಳಿದ್ರೆ ಸಾಕಾಗಲ್ಲ, ಎನ್​​ಕೌಂಟರ್​ ಮಾಡಿ ಬುದ್ಧಿ ಕಲಿಸಿ: ಯತ್ನಾಳ್​

ಕೊತ್ವಾಲ್ ರಾಮಚಂದ್ರನ ಶಿಷ್ಯರಿಂದ ನಾವು ಪಾಠ ಕಲಿಯಬೇಕಿಲ್ಲ. ಕೊತ್ವಾಲ್ ರಾಮಚಂದ್ರ ಬೆಂಗಳೂರಿನ ದೊಡ್ಡ ರೌಡಿಯಾಗಿದ್ದ. ಕೊತ್ವಾಲ್​ಗೆ ಸಿಗರೇಟ್ ತಂದು ಕೊಡುತ್ತಿದ್ದವರು ಪಾಠ ಮಾಡ್ತಿದ್ದಾರೆ. ಬ್ಲೂಫಿಲ್ಮ್​ ಫ್ಯಾಕ್ಟರಿ ನಡೆಸೋರು BJP ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರಗೆ ಶಾಸಕ ಯತ್ನಾಳ್ ತಿರುಗೇಟು ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here