ಶಿವಮೊಗ್ಗ:ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಯಾರಿಗೂ ದ್ರೋಹ ಮಾಡುವ ಕೆಲಸ ಮಾಡಿಲ್ಲ. ತಮ್ಮ ಜೀವನದಲ್ಲಿ ಪಕ್ಷಕ್ಕೆ ಶಕ್ತಿ ಇಲ್ಲದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ಮಾಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಸೋತಾಗ ರಾಜ್ಯಸಭೆ ಸದಸ್ಯರನ್ನಾಗಿ ಮಾಡ್ತೇವೆ ಬನ್ನಿ ಅಂದ್ರು ಆದರೆ, ಯಡಿಯೂರಪ್ಪ ಅವರು ನನಗೆ ರಾಜ್ಯಸಭೆ ಬೇಡ ರಾಜಶೇಖರ ಮೂರ್ತಿ ಅವರನ್ನು ರಾಜ್ಯಸಭೆಗೆ ಮಾಡಿ ಎನ್ನುವ ಮೂಲಕ ಮುತ್ಸದ್ದಿತನ ಮೆರೆದಿದ್ದಾರೆ.ಈ ಬಾರಿ ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ. ಅಧಿಕೃತವಾಗಿ ನನ್ನ ಹೆಸರು ಘೋಷಣೆ ಮಾಡಿದ ಬಿಜೆಪಿ ಹೈಕಮಾಂಡ್ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹಳಬರ ಜೊತೆ ಕೆಲಸ ಮಾಡಿದ್ದೆ.ಆ ನೆನಪು ಇಂದಿಗೂ ಇದೆ. ಹೊಸಬರಿಗೆ ಶುಭ ಕೋರುತ್ತೇನೆ ಎಂದರು.
ವಿಪಕ್ಷದವರ ಆರೋಪಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಾವು ಮಾಡಿದ ಅಭಿವೃದ್ಧಿ ಕೆಲಸದ ಬಗ್ಗೆ ಜನರಿಗೆ ತಿಳಿಸುತ್ತೇವೆ. ರಾಮ ಮಂದಿರ ಉದ್ಘಾಟನೆಯಂತಹ ಅಭಿವೃದ್ಧಿ ಕೆಲಸದಿಂದ ಜನರಿಗೆ ವಿಶ್ವಾಸ ಹೆಚ್ಚಾಗಿದೆ. ಈ ಬಾರಿ 370 ಕ್ಕೂ ಹೆಚ್ಚು ಸ್ತಾನಗಳನ್ನು ಬಿಜೆಪಿ ಗೆಲ್ಲಲ್ಲಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ 28 ಕ್ಕೆ 28 ಸ್ಥಾನ ಪಡೆಯಲಿದೆ ಎಂದರು.
ನುಡಿದಂತೆ ನಡೆದಂತಹ ಸರಕಾರ ಮೋದಿ ಸರಕಾರ. ರಾಷ್ಟ್ರ ಭಕ್ತರು ರಾಷ್ಟ್ರದ ಹಿತಕೋಸ್ಕರ ಚಿಂತನೆ ಮಾಡುತ್ತಾರೆ.ದೇಶ, ಮೋದಿ ಬಿಟ್ಟು ಚಿಂತನೆ ಮಾಡಲ್ಲ ಎಂದರು.
