Bengaluru: Man from Laggere died on spot after falling from train | ಬೆಂಗಳೂರಿನ ಲಗ್ಗೆರೆ ಮೂಲದ ವ್ಯಕ್ತಿ ರೈಲಿನಿಂದ ಬಿದ್ದ ಸ್ಥಳದಲ್ಲಿಯೇ ಸಾವು
ಆನೇಕಲ್ (ಬೆಂಗಳೂರು): ರೈಲಿನಿಂದ ಬಿದ್ದು ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ಹಳೆ ಚಂದಾಪುರ ಸಮೀಪದ ರೈಲ್ವೆ ಬ್ರಿಡ್ಜ್ ಬಳಿ ಜರುಗಿದೆ.
ಬೆಂಗಳೂರಿನ ಲಗ್ಗೆರೆ ಮೂಲದ ವ್ಯಕ್ತಿ ರೈಲಿನಿಂದ ಬಿದ್ದ ಪರಿಣಾಮ ಕೈಕಾಲು ಮುರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕುಡಿದ ಮತ್ತಿನಲ್ಲಿ ಆಯಾತಪ್ಪಿ ರೈಲಿನಿಂದ ಕೆಳಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬೈಯ್ಯಪ್ಪನಹಳ್ಳಿ ಪೊಲೀಸರು ಹಾಗೂ ಸೂರ್ಯನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
