ನಿನ್ನೆಯಷ್ಟೇ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಸಿನಿಮಾ ರಂಗಕ್ಕೆ ನಿರ್ಮಾಪಕರಾಗಿ ಪ್ರವೇಶ ಮಾಡುತ್ತಿರುವ ವಿಷಯ ಬಹಿರಂಗವಾಗಿತ್ತು. ಇದೀಗ ಅವರ ನಿರ್ಮಾಣದ ಸಿನಿಮಾವನ್ನು ಲೋಹಿತ್ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಮತ್ತೊಂದು ಹಾರಾರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ ನಿರ್ದೇಶಕ ಲೋಹಿತ್ (Lohit). ಇವರ ಹೊಸ ಕನಸಿನ ಸಿನಿಮಾಗೆ ರವಿರಾಜ್ ಬಂಡವಾಳ
ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ನಟನೆ ಜೊತೆಗೆ ನಿರ್ಮಾಣದಲ್ಲೂ ಗುರುತಿಸಿಕೊಂಡಿದ್ದಾರೆ. ತಮ್ಮ ಶಮಿಕಾ ಎಂಟರ್ ಪ್ರೈಸಸ್ ಮೂಲಕ ರಾಧಿಕಾ ಮೂರು ಸಿನಿಮಾಗನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಅವರ ಸಹೋದರ ರವಿರಾಜ್ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಟನಾಗಿ ಅಲ್ಲ ನಿರ್ಮಾಪಕನಾಗಿ. ರವಿರಾಜ್ (Raviraj) ಅವರಿಗೆ ಸಿನಿಮಾರಂಗ ಹೊಸದೇನಲ್ಲ. ತನ್ನ ಸಹೋದರಿ ರಾಧಿಕಾ ಅವರ ಶಮಿಕಾ ಎಂಟರ್ ಪ್ರೈಸಸ್ ನಲ್ಲಿ ಸಹ ನಿರ್ಮಾಪಕನಾಗಿ ಕೆಲಸ ಮಾಡಿರುವ ಅನುಭವ ರವಿರಾಜ್ ಅವರಿಗಿದೆ. ‘ಲಕ್ಕಿ’, ‘ಸ್ವೀಟಿ ನನ್ನ ಜೋಡಿ’, ಭೈರಾದೇವಿ ಸಿನಿಮಾಗಳಲ್ಲಿ ರವಿರಾಜ್ ತಂಗಿ ರಾಧಿಕಾ ಜೊತೆ ಕೆಲಸ ಮಾಡಿದ್ದರು ಜೊತೆಗೆ ಸಿನಿಮಾ ವಿತರಣೆ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ. ಆದರೀಗ ಸ್ವತಂತ್ರ ನಿರ್ಮಾಪಕರಾಗಿ ಚಂದನವನಕ್ಕೆ (Sandalwood) ಪದಾರ್ಪಣೆ ಮಾಡತ್ತಿದ್ದಾರೆ ರವಿರಾಜ್.
The post ರಾಧಿಕಾ ಕುಮಾರಸ್ವಾಮಿ ಸಹೋದರನ ಚಿತ್ರಕ್ಕೆ ನಿರ್ದೇಶಕರಾಗಿ ಲೋಹಿತ್ appeared first on Ain Live News.