BC Patil: ಕಾಂಗ್ರೆಸ್ ನಿಂದ ರೈತರು ಬೀದಿಗೆ ಬಿದ್ದಿದ್ದಾರೆ, ಇದು ದರಿದ್ರ ಸರ್ಕಾರ – ಬಿಸಿ ಪಾಟೀಲ್
ಬೆಂಗಳೂರು;- ಕಾಂಗ್ರೆಸ್ ಸರಕಾರ ಆಡಳಿತ ಇದ್ದಾಗ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಸರಕಾರ ಆಡಳಿತ ಇದ್ದಾಗ ಅತಿ ಹೆಚ್ಚು ಆತ್ಮಹತ್ಯೆ ಆಗಿದೆ ಎಂದು ಬಿ.ಸಿ.ಪಾಟೀಲ್ ಅವರು ಅಂಕಿಅಂಶಗಳನ್ನು ಮುಂದಿಟ್ಟಿದ್ದಾರೆ. 2015-16ರಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಮಾಡುವಾಗ 1,525 ರೈತರು ಆತ್ಮಹತ್ಯೆ ಮಾಡಿಕೊಂಡರೆ, 16-17ರಲ್ಲಿ 1,203 ರೈತರು, 17-18ರಲ್ಲಿ 1,320 ರೈತರು ಆತ್ಮಹತ್ಯೆ ಮಾಡಿಕೊಂಡರು ಎಂದು ಅಂಕಿ ಅಂಶಗಳನ್ನ ತಿಳಿಸಿದ್ದಾರೆ.
ರೈತರು ಬೀದಿಗೆ ಬಿದ್ದಿದ್ದಾರೆ. ಆಗಸದತ್ತ ನೋಡುವ ಸ್ಥಿತಿ ಬಂದಿದೆ. ಸರಕಾರದತ್ತ ನೋಡಿದರೂ ಅಲ್ಲಿಂದ ಪರಿಹಾರ ಸಿಗುತ್ತಿಲ್ಲ ಎಂದ ಅವರು, ಸರಕಾರ ಕೇವಲ ಕೇಂದ್ರ ಸರಕಾರದತ್ತ ತೋರಿಸುತ್ತಿದೆ. ಇದು ರೈತವಿರೋಧಿ ಸರಕಾರ. ಬರ ವೀಕ್ಷಣೆ ವರದಿ ಸಂಬಂಧ ತಂಡ ಬಂದಿದೆ. ಅವರ ವರದಿ ಸಿಕ್ಕಿದ ಬಳಿಕ ಕೇಂದ್ರವು ತನ್ನ ಪಾಲಿನ ಹಣ ಕೊಡುತ್ತದೆ. ಕಳೆದ ವರ್ಷ ನಾವು ಕೇಂದ್ರದ ಪರಿಹಾರ ಮೊತ್ತ ಬರುವ ಮೊದಲೇ ದ್ವಿಗುಣ ಮೊತ್ತವನ್ನು ಕೊಟ್ಟಿದ್ದೇವೆ. ಈ ವರ್ಷ ಯಾಕೆ ಆಗುತ್ತಿಲ್ಲ? ನೀವು ಮಾಡಬೇಕಲ್ಲ? ಎಂದು ಕೇಳಿದರು. ನಮ್ಮದು ರೈತರನ್ನು ಬದುಕಿಸುವ ಧ್ಯೇಯವಾಗಿತ್ತು ಎಂದರು.
ರಾಜ್ಯ ಸರಕಾರ ದಿವಾಳಿ ಆಗಿದೆ. ರಾಜ್ಯ ಸರಕಾರದ ಬಳಿ ಹಣ ಇಲ್ಲ. ಇದ್ದ ಬದ್ದ ಹಣವನ್ನೆಲ್ಲ ಕೇವಲ ಭಾಗ್ಯಗಳಿಗೆ ಕೊಡುತ್ತಿದ್ದಾರೆ. ಭಾಗ್ಯಗಳಿಗೆ ಕೊಡಬೇಡಿ ಎನ್ನುತ್ತಿಲ್ಲ. ಅಕ್ಕಿಯ ದುಡ್ಡನ್ನು ಒಂದು ತಿಂಗಳಿಗಷ್ಟೇ ಕೊಟ್ಟಿದ್ದಾರೆ. ಎರಡನೇ ತಿಂಗಳು ಅರ್ಧಕ್ಕರ್ಧ ಕೊಟ್ಟಿದ್ದಾರೆ. ಭಾಗ್ಯಗಳಿಗೆ ಹಣ ಕೊಡಲು ಆಗುತ್ತಿಲ್ಲ. ಪಡಿತರ ಚೀಟಿಗಳನ್ನು ಒಂದಲ್ಲ ಒಂದು ನೆವ ಇಟ್ಟುಕೊಂಡು ರದ್ದು ಮಾಡುತ್ತಿದ್ದಾರೆ. ಕಂಡಿಷನ್ ಹಾಕಿ, ಸರ್ವರ್ ಬಂದ್ ಮಾಡುತ್ತಿದ್ದಾರೆ. ಇದರಿಂದ ನೋಂದಣಿ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
The post BC Patil: ಕಾಂಗ್ರೆಸ್ ನಿಂದ ರೈತರು ಬೀದಿಗೆ ಬಿದ್ದಿದ್ದಾರೆ, ಇದು ದರಿದ್ರ ಸರ್ಕಾರ – ಬಿಸಿ ಪಾಟೀಲ್ appeared first on Ain Live News.