ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 39 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ರಾಹುಲ್ ಗಾಂಧಿ ವಯನಾಡಿನಿಂದ, ಶಶಿತರೂರ್ ತಿರುವನಂತಪುರಂ, ಡಿ ಕೆ ಸುರೇಶ್ ಬೆಂಗಳೂರು ಗ್ರಾಮಾಂತರದಿಂದ, ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗದಿಂದ ಸ್ಪರ್ಧಿಸಲಿದ್ದಾರೆ.
ದಿಲ್ಲಿಯ ಕಾಂಗ್ರೆಸ್ ಹೆಡ್ ಕ್ವಾರ್ಟರ್ಸ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಪಟ್ಟಿ ಬಿಡುಗಡೆ ಮಾಡಿದರು. ಕರ್ನಾಟಕದ ತುಮಕೂರಿನಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎಸ್ ಪಿ ಮುದ್ದಹನುಮೇಗೌಡ ಅವರಿಗೆ ಪಕ್ಷ ಟಿಕೆಟ್ ಘೋಷಿಸಿದೆ. ಮಂಡ್ಯದಿಂದ ಸ್ಟಾರ್ ಚಂದ್ರು(ವೆಂಕಟರಾಮೇಗೌಡ) ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನುಳಿದಂತೆ ಹಾಸನದಿಂದ ಎಂ ಶ್ರೇಯಸ್ ಪಟೇಲ್, ವಿಜಯಪುರದಿಂದ ಎಚ್ ಆರ್ ಅಲಗೂರು (ರಾಜು) ಹಾವೇರಿಯಿಂದ ಅನಂದ್ ಗಡ್ಡೇವರ ಮಠ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಕಾಂಗ್ರೆಸ್ ಬಿಡುಗಡೆಗೊಳಿಸಿದ ಮೊದಲ ಪಟ್ಟಿ ಹೀಗಿದೆ :
ಛತ್ತೀಸ್ ಗಢ :
1 . ಜಾನ್ ಗಿರ್ ಚಾಂಪ – ಡಾ ಶಿವಕುಮಾರ್ ದಹರಿಯಾ
2. ಕೋರ್ಬಾ – ಜ್ಯೋತ್ಸ್ನಾ ಮಹಂತ್
3. ರಜ್ನಾನ್ದೊಗಾಂವ್ – ಭೂಪೇಶ್ ಬಘೇಲ್
4. ದುರ್ಗ್ – ರಾಜೇಂದ್ರ ಸಾಹು
5. ರಾಯ್ಪುರ – ವಿಕಾಸ್ ಉಪಾಧ್ಯಾಯ್
6. ಮಹಾಸಮುಂದ್ – ತಾಮರ್ ಧ್ವಜ್ ಸಾಹು