Home ಚಿತ್ರದುರ್ಗ Chitradurga: ಡ್ರೋನ್‌ ಪತನ

Chitradurga: ಡ್ರೋನ್‌ ಪತನ

12
0
Chitradurga: Drone crash
Chitradurga: Drone crash
Advertisement
bengaluru

ಚಿತ್ರದುರ್ಗ:

ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಮಾನವ ರಹಿತ ಡ್ರೋನ್‌ ವಿಮಾನ ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮದ ಬಳಿ ಭಾನುವಾರ ಬೆಳಿಗ್ಗೆ ಪತನಗೊಂಡಿದೆ.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಸಿದ್ಧಪಡಿಸಿದ್ಧ ಯುದ್ಧ ವಿಮಾನ ನಾಯಕನಹಟ್ಟಿ ಸಮೀಪದ ಕುದಾಪುರ ವಾಯುನೆಲೆಯಿಂದ ಭಾನುವಾರ ಬೆಳಿಗ್ಗೆ ಹಾರಾಟ ಆರಂಭಿಸಿತ್ತು. ನಿಯಂತ್ರಣ ತಪ್ಪಿ ಜಮೀನಿನಲ್ಲಿ ಪತನವಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

ಡ್ರೋನ್‌ ಮಾದರಿಯ ವಿಮಾನ ಪತನವಾದ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ವಿಮಾನದ ಪಳೆಯುಳಿಕೆಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಪೊಲೀಸರು ಹಾಗೂ ವಾಯುಪಡೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

bengaluru bengaluru

ಜೆಟ್ ವಿಮಾನ ಪತನವಾದ ಸ್ಥಳಕ್ಕೆ ಆಗಮಿಸಿದ ಡಿಆರ್‌ಡಿಓ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಘಟನೆ ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ


bengaluru

LEAVE A REPLY

Please enter your comment!
Please enter your name here