Home Uncategorized ವಿಕಸಿತ ಸಂಕಲ್ಪ ಯಾತ್ರೆ: 10 ಕೋಟಿ ದಾಟಿದ ಭಾಗಿಯಾದವರ ಸಂಖ್ಯೆ

ವಿಕಸಿತ ಸಂಕಲ್ಪ ಯಾತ್ರೆ: 10 ಕೋಟಿ ದಾಟಿದ ಭಾಗಿಯಾದವರ ಸಂಖ್ಯೆ

7
0

ಹೊಸದಿಲ್ಲಿ: ಸುಮಾರು 50 ದಿನಗಳಲ್ಲಿ ವಿಕಸಿತ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾದವರ ಸಂಖ್ಯೆ 10 ಕೋಟಿಯನ್ನು ದಾಟಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷದ ನ.15ರಂದು ಜಾರ್ಖಂಡ್ ನ ಖುಂಟಿಯಲ್ಲಿ ಯಾತ್ರೆಗೆ ಚಾಲನೆ ನೀಡಿದ್ದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡವರ ಸಂಖ್ಯೆಯು ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ದ.ಆಫ್ರಿಕಾದಂತಹ ಕೆಲವು ಪ್ರಮುಖ ದೇಶಗಳ ಇಡೀ ಜನಸಂಖ್ಯೆಗಿಂತ ಹೆಚ್ಚಾಗಿದೆ. ಯಾತ್ರೆಗೆ ಲಭಿಸಿರುವ ಬೃಹತ್ ಬೆಂಬಲವು ವಿಕಸಿತ ಭಾರತ ನಿರ್ಮಾಣಕ್ಕಾಗಿ ನಾಗರಿಕರ ದೃಢ ಸಂಕಲ್ಪವನ್ನು ತೋರಿಸುತ್ತಿದೆ ಎಂದೂ ಸಚಿವಾಲಯವು ಹೇಳಿದೆ.

ಜನಕಲ್ಯಾಣ ಯೋಜನೆಗಳು ತಳಮಟ್ಟಕ್ಕೆ ತಲುಪುವಂತಾಗಲು ಮತ್ತು ಜನರಿಗೆ ನೇರ ಲಾಭವಾಗುವಂತಾಗಲು ಕೇಂದ್ರ ಸರಕಾರವು ಈ ಅಭಿಯಾನವನ್ನು ಆರಂಭಿಸಿದೆ. ಅರುಣಾಚಲ ಪ್ರದೇಶದ ಮುಕುಟಮಣಿ ಅಂಜಾವ್ನಿಂದ ಹಿಡಿದು ಗುಜರಾತಿನ ಪಶ್ಚಿಮ ತೀರದ ದೇವಭೂಮಿ ದ್ವಾರಕಾವರೆಗೆ, ಲಡಾಖ್ನ ಹಿಮಶಿಖರಗಳು ಮತ್ತು ಅಂಡಮಾನ್ನ ವೈಡೂರ್ಯ ತೀರಗಳವರೆಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಎಲ್ಲ ಪ್ರದೇಶಗಳನ್ನು, ದೇಶದ ಮೂಲೆಮೂಲೆಯಲ್ಲಿನ ಎಲ್ಲ ಸಮುದಾಯಗಳನ್ನು ತಲುಪಲಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. 

LEAVE A REPLY

Please enter your comment!
Please enter your name here