Home Uncategorized ವೃತ್ತಿಪರ ಕೋರ್ಸ್‍ಗಳ ಶುಲ್ಕದಲ್ಲಿ ಯಾವುದೇ ಬದಲಾವಣೆಗಳಿಲ್ಲ: ಸಚಿವ ಡಾ.ಎಂ.ಸಿ.ಸುಧಾಕರ್ ಸ್ಪಷ್ಟನೆ

ವೃತ್ತಿಪರ ಕೋರ್ಸ್‍ಗಳ ಶುಲ್ಕದಲ್ಲಿ ಯಾವುದೇ ಬದಲಾವಣೆಗಳಿಲ್ಲ: ಸಚಿವ ಡಾ.ಎಂ.ಸಿ.ಸುಧಾಕರ್ ಸ್ಪಷ್ಟನೆ

6
0

ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಶಿಕ್ಷಣ ಶುಲ್ಕವನ್ನು ಹಿಂದಿನ ಸರಕಾರವೇ ಶೇ.10ರಷ್ಟು ಹೆಚ್ಚಿಸಿ ಪರಿಷ್ಕರಣೆ ಮಾಡಿದ್ದು, ಈಗ ಯಾವುದೇ ಬದಲಾವಣೆಗೆ ಮುಂದಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಶಿಕ್ಷಣ ಶುಲ್ಕವನ್ನು ಹಿಂದಿನ ಸರಕಾರವೇ ಶೇ.10ರಷ್ಟು ಹೆಚ್ಚಿಸಿ ಪರಿಷ್ಕರಣೆ ಮಾಡಿದ್ದು, ಈಗ ಯಾವುದೇ ಬದಲಾವಣೆಗೆ ಮುಂದಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಸ್ಪಷ್ಟಪಡಿಸಿದ್ದಾರೆ.

ನಗರದ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಹಿಂದಿನ ವರ್ಷಗಳಲ್ಲಿ ಇಂಜಿನಿಯರಿಂಗ್ ಕೋರ್ಸ್‍ಗೆ ಸರಕಾರಿ ಕಾಲೇಜುಗಳಲ್ಲಿ 38,200ರೂ, ಅನುದಾನ ರಹಿತ ಕಾಲೇಜು, ಖಾಸಗಿ ಹಾಗೂ ಸ್ವಾಯತ್ತ ಕಾಲೇಜುಗಳಲ್ಲಿ 91,796ರೂ, ಎರಡನೆ ಶ್ರೇಣಿಯ ಅನುದಾನ ರಹಿತ ಕಾಲೇಜುಗಳಲ್ಲಿ 98,984ರೂ.ಶುಲ್ಕವಿತ್ತು. ಈ ವರ್ಷ ಅದರ ಜತೆಗೆ ಶೇ.10ರಷ್ಟು ಹೆಚ್ಚುವರಿಯಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ: ಅಭಿಪ್ರಾಯ ಸಂಗ್ರಹದ ಬಳಿಕ ಎನ್ಇಪಿ ಕುರಿತು ಅಂತಿಮ ನಿರ್ಧಾರ: ಸಚಿವ ಸುಧಾಕರ್

‘ಬಿ’ ಫಾರ್ಮಾ ಕೋರ್ಸ್‍ಗೆ ಸರಕಾರಿ ಕಾಲೇಜುಗಳಲ್ಲಿ 14,530ರೂ., ಅನುದಾನ ರಹಿತ ಕಾಲೇಜುಗಳಲ್ಲಿ 26,500ರೂ., ‘ಡಿ’ ಫಾರ್ಮಾ ಕೋರ್ಸ್‍ಗೆ ಅನುದಾನ ರಹಿತ ಕಾಲೇಜುಗಳಲ್ಲಿ 67,500 ರೂ., ಪಶು ವೈದ್ಯಕೀಯ ಕೋರ್ಸ್‍ಗೆ ಸರಕಾರಿ ಕಾಲೇಜಿನಲ್ಲಿ 53,170ರೂ., ಮೀನುಗಾರಿಗೆ ಮತ್ತು ಪಶುಸಂಗೋಪನೆ, ಬಿಎಫ್ ಕೋರ್ಸ್‍ಗೆ 29,170ರೂ. ಶುಲ್ಕವನ್ನು ಹಿಂದಿನ ವರ್ಷ ನಿಗದಿ ಮಾಡಲಾಗಿತ್ತು.

ಇನ್ನೂ, ಶುಲ್ಕ ಪರಿಷ್ಕರಣೆಗಾಗಿ ಹಿಂದಿನ ಸರಕಾರ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕಾಲೇಜು ಆಡಳಿತ ಮಂಡಳಿಗಳ ಜತೆ ಸುದೀರ್ಘ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಂಡಿದೆ. ಬಳಿಕ ಶುಲ್ಕ ಹೆಚ್ಚಳಕ್ಕೆ ಈಗಾಗಲೇ ಆದೇಶವೂ ಜಾರಿಯಾಗಿದೆ. ಅದನ್ನು ಬದಲಾವಣೆ ಮಾಡುವುದಿಲ್ಲ.

ಮಾತುಕತೆ ಹಾಗೂ ಸಂಧಾನ ಪ್ರಕ್ರಿಯೆಗಳ ಮೂಲಕವೇ ಶುಲ್ಕ ನಿಗದಿಯಾಗಿರುವುದರಿಂದ ಮತ್ತೊಮ್ಮೆ ಶುಲ್ಕವನ್ನು ಹೆಚ್ಚಿಸುವುದಾಗಲಿ ಅಥವಾ ಕಡಿಮೆ ಮಾಡುವ ಅಗತ್ಯ ಇಲ್ಲ ಎಂದು ಖಚಿತಪಡಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕುರಿತು ಮಾತನಾಡಿ, ಶಾಲೆ ಮತ್ತು ಉನ್ನತ ಶಿಕ್ಷಣ ಎರಡನ್ನೂ ಒಳಗೊಂಡಿರುವ ಕಾರಣ ಈ ಕುರಿತು ವಿವರವಾದ ಚರ್ಚೆ ನಡೆಸಬೇಕಿದೆ. ಪಠ್ಯಕ್ರಮದ ಬದಲಾವಣೆಯ ಹೊರತಾಗಿ ಶಾಲೆಗಳಲ್ಲಿ ಎನ್ಇಪಿ ಜಾರಿಗೆ ಬಂದಿಲ್ಲ. ಈ ಕುರಿತು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here