ರಾಯಚೂರು: ಆಸ್ಪತ್ರೆಯಲ್ಲಿ ರೋಗಿಗಳಿಂದ ನರ್ಸ್ ಹಣ ವಸೂಲಿ ಮಾಡಿದ ವಿಡಿಯೋ ವೈರಲ್ ಆಗಿದೆ. ರಾಯಚೂರು ಜಿಲ್ಲೆ ಲಿಂಗಸಗೂರು ಆಸ್ಪತ್ರೆ ಸಿಬ್ಬಂದಿ ಸಹಜ ಹೆರಿಗೆಗೆ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ. ಸಹಜ ಹೆರಿಗೆಗೆ ಒಂದು ರೇಟ್ ಮತ್ತು ಸಿಜೇರಿಯನ್ಗೆ ಒಂದು ರೇಟ್ ಫಿಕ್ಸ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ರೋಗಿಗಳು ಹಣ ಕೊಟ್ಟರೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ. ರೋಗಿಯ ಕುಟುಂಬಸ್ಥರೊಬ್ಬರಿಗೆ ಆಸ್ಪತ್ರೆ ಸಿಬ್ಬಂದಿ, ಸಹಜ ಹೆರಿಗೆಗೆ 15 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದು ಮೊದಲು 5 ಸಾವಿರ ರೂ. ನೀಡಲಾಗಿದೆ. ಚಿಕಿತ್ಸೆ ಬಳಿಕ ಉಳಿದ ಹಣ ಕೊಡುವಂತೆ ಸಿಬ್ಬಂದಿ ತಾಕೀತು ಮಾಡಿದ್ದು ಹಣ ಪಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಣ ಪಡೆದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.