2020ರ ಮಾರ್ಚ್ ನಂತರ 2021ರವರೆಗೆ ಕೋವಿಡ್ ಸೋಂಕಿನ ಮಹಾಮಾರಿಗೆ ಸಾಕಷ್ಟು ಸಾವು ನೋವುಗಳನ್ನು ನೋಡಿದ್ದೇವೆ. ಕೊರೋನಾ ಬಳಿಕ ರಾಜ್ಯದಲ್ಲಿ ಈ ವರ್ಷ ಇತ್ತೀಚೆಗೆ ಹೆಚ್ 3ಎನ್ 2 ವೈರಲ್ ಸೋಂಕು ಕಾಲಿಟ್ಟಿದೆ. ಇದು ಆತಂಕ ಮೂಡಿಸಿದ್ದು ಶೀತ, ಜ್ವರ ಬೇಸಿಗೆಯಲ್ಲಿ ಸಾಕಷ್ಟು ಜನರನ್ನು ಕಾಡುತ್ತಿದೆ. ಬೆಂಗಳೂರು; 2020ರ ಮಾರ್ಚ್ ನಂತರ 2021ರವರೆಗೆ ಕೋವಿಡ್ ಸೋಂಕಿನ ಮಹಾಮಾರಿಗೆ ಸಾಕಷ್ಟು ಸಾವು ನೋವುಗಳನ್ನು ನೋಡಿದ್ದೇವೆ. ಕೊರೋನಾ ಬಳಿಕ ರಾಜ್ಯದಲ್ಲಿ ಈ ವರ್ಷ ಇತ್ತೀಚೆಗೆ ಹೆಚ್ 3ಎನ್ 2 ವೈರಲ್ ಸೋಂಕು ಕಾಲಿಟ್ಟಿದೆ. ಇದು ಆತಂಕ ಮೂಡಿಸಿದ್ದು ಶೀತ, ಜ್ವರ ಬೇಸಿಗೆಯಲ್ಲಿ ಸಾಕಷ್ಟು ಜನರನ್ನು ಕಾಡುತ್ತಿದೆ.
ಅದರೊಟ್ಟಿಗೆ ಇದೀಗ ಹೆಚ್ 3ಎನ್ 2 ಸೋಂಕಿಗೆ ಕರ್ನಾಟಕದಲ್ಲಿ ಮೊದಲ ಸಾವು ಸಂಭವಿಸಿದೆ. H3N2 ವೈರಸ್ನಿಂದ ಬಳಲುತ್ತಿದ್ದ ಹಾಸನ ಮೂಲದ ವೃದ್ಧ ಮೃತಪಟ್ಟಿದ್ದಾರೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಆಯುಕ್ತರೇ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಜ್ವರ, ಚಳಿ, ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ H3N2 ವೈರಸ್ ಹೆಚ್ಚಾಗುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಈವರೆಗೆ 6 ಮಂದಿಗೆ H3N2 ಸೋಂಕು ದೃಢಪಟ್ಟಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಅವೈಜ್ಞಾನಿಕ ಬಳಕೆ ಬೇಡ: ದೇಶಾದ್ಯಂತ ಹೆಚ್ಚುತ್ತಿರುವ ಕೆಮ್ಮು, ಶೀತ ಮತ್ತು ವಾಕರಿಕೆ ಪ್ರಕರಣಗಳ ಮಧ್ಯೆ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಆಂಟಿಬಯೋಟಿಕ್‌ಗಳ ವಿವೇಚನೆಯಿಲ್ಲದ ಬಳಕೆಯ ವಿರುದ್ಧ ಸಲಹೆ ನೀಡಿದ್ದು, ಆ್ಯಂಟಿ ಬಯಾಟಿಕ್ ಗಳ ಅವೈಜ್ಞಾನಿಕ ಬಳಕೆ ಬೇಡ ಎಂದು ಎಚ್ಚರಿಸಿದೆ. ಅಲ್ಲದೆ ಋತುಮಾನದ ಜ್ವರವು ಐದರಿಂದ ಏಳು ದಿನಗಳವರೆಗೆ ಇರುತ್ತದೆ. ಜ್ವರವು ಮೂರು ದಿನಗಳ ಕೊನೆಯಲ್ಲಿ ಹೋಗುತ್ತದೆ. ಆದರೆ ಕೆಮ್ಮು ಮೂರು ವಾರಗಳವರೆಗೆ ಇರುತ್ತದೆ. ಈ ಬಗ್ಗೆ ಆತಂಕ ಬೇಡ ಎಂದು IMA ಯ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಸ್ಥಾಯಿ ಸಮಿತಿ ಹೇಳಿದೆ.