Home Uncategorized ಹೆಸರಿನ ಕಾರಣಕ್ಕೆ ಉರ್ಫಿ ಜಾವೇದ್​ಗೆ ಶುರುವಾಯಿತು ಹೊಸ ಚಿಂತೆ: ಅರಬ್​ ರಾಷ್ಟ್ರಗಳಿಗೆ ನೋ ಎಂಟ್ರಿ

ಹೆಸರಿನ ಕಾರಣಕ್ಕೆ ಉರ್ಫಿ ಜಾವೇದ್​ಗೆ ಶುರುವಾಯಿತು ಹೊಸ ಚಿಂತೆ: ಅರಬ್​ ರಾಷ್ಟ್ರಗಳಿಗೆ ನೋ ಎಂಟ್ರಿ

45
0

ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್​ (Urfi Javed) ತಮ್ಮ ವಿಚಿತ್ರ ಉಡುಗೆಗಳಿಂದಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡವರು. ವಿಭಿನ್ನ ಬಟ್ಟೆ ಧರಿಸುವುದು ಅಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಬಟ್ಟೆಯಲ್ಲಿ ಎಲ್ಲ ಬಗೆಯ ಪ್ರಯೋಗಗಳನ್ನೂ ಅವರು ಮಾಡುತ್ತಿರುತ್ತಾರೆ. ಜೊತೆಗೆ ಅದನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸಾಕಷ್ಟು ಭಾರಿ ತಮ್ಮ ಉಡುಗೆಗಳಿಂದ ನೆಟ್ಟಿಗರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಸದ್ಯ ಉರ್ಫಿ ಜಾವೇದ್ ಅವರು ಮತ್ತೆ ಸುದ್ದಿಯಾಗಿದ್ದಾರೆ. ಆದರೆ ಅವರು ಧರಿಸುವ ಉಡುಗೆಯಿಂದಲ್ಲ, ಬದಲಾಗಿ ಬೇರೆಯದೇ ವಿಚಾರಕ್ಕೆ.

ಅರಬ್​ ರಾಷ್ಟ್ರಗಳಲ್ಲಿ ಪಾಸ್‌ಪೋರ್ಟ್ ವಿಚಾರವಾಗಿ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ. ನವೆಂಬರ್ 21 ರಂದು, ಏರ್ ಇಂಡಿಯಾ ಮತ್ತು AI ಎಕ್ಸ್‌ಪ್ರೆಸ್ ಒಂದೇ ಹೆಸರಿನ ಯಾವುದೇ ಪಾಸ್‌ಪೋರ್ಟ್​​ ಹೊಂದಿರುವವರನ್ನು ಯುಎಇ ಸ್ವೀಕರಿಸುವುದಿಲ್ಲ ಎಂದು ತಿಳಿಸಿದೆ. ಸರ್ ನೇಮ್ ಅಥವಾ ಒಂದೇ ಪದದ ಹೆಸರನ್ನು ಹೊಂದಿರುವ ಯಾವುದೇ ಪಾಸ್‌ಪೋರ್ಟ್ ಹೊಂದಿರುವವರನ್ನು ಯುಎಇ ಸ್ವೀಕರಿಸುವುದಿಲ್ಲ ಎಂದು ಇತ್ತೀಚೆಗೆ ಬದಲಾದ ನಿಯಮಗಳಲ್ಲಿ ತಿಳಿಸಲಾಗಿದೆ.

ಇದನ್ನು ಗಮನಿಸಿರುವ ಉರ್ಫಿ ಜಾವೇದ್ ಅವರು ಅಚ್ಚರಿ ಮತ್ತು ಭಯಪಟ್ಟಿದ್ದಾರೆ. ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಮೂಲ ಹೆಸರು ಉರ್ಫಿ. ಯಾವುದೇ ಸರ್ ನೇಮ್ ಇಲ್ಲ. ಹಾಗಾದ್ರೆ ನಾನು ಅರಬ್​ ರಾಷ್ಟ್ರಗಳಿಗೆ ಹೋಗಲು ಆಗುವುದಿಲ್ವಾ’? ಎಂಬ ಆತಂಕವನ್ನು ಹೊರಹಾಕಿದ್ದಾರೆ. ಅಲ್ಲಿಗೆ ಉರ್ಫಿ ಜಾವೇದ್​​​ ಅವರು ಈ ಹೊಸ ನಿಮಯದಿಂದ ತೊಂದರೆ ಎದುರಿಸಲಿದ್ದಾರೆ ಎನ್ನಲಾಗುತ್ತಿದೆ.

ಒಂದೇ ಹೆಸರಿನ ಪ್ರಯಾಣಿಕರಿಗೆ ವೀಸಾ ನೀಡಲಾಗುವುದಿಲ್ಲ. ವೀಸಾವನ್ನು ನೀಡಿದ್ದರೆ ಅವರು ವಲಸೆಯ ಮೂಲಕ ಅನಧಿಕೃತ ಪ್ರಯಾಣಿಕರಾಗುತ್ತಾರೆ. ವಿಸಿಟಿಂಗ್ ವೀಸಾ, ಆಗಮನದ ವೀಸಾ ಮತ್ತು ತಾತ್ಕಾಲಿಕ ವೀಸಾಗಳನ್ನು ಹೊಂದಿರುವ ಜನರಿಗೆ ಮಾತ್ರ ನಿಯಮ ಅನ್ವಯಿಸುತ್ತದೆ ಎಂದು ಹೊಸ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚೆಗೆ ಉರ್ಫಿ ಜಾವೇದ್​ ಅವರು ಒಂದು ಮ್ಯೂಸಿಕ್​ ವಿಡಿಯೋದಲ್ಲಿ ನಟಿಸಿದ್ದರು. ‘ಹಾಯ್​ ಹಾಯ್​ ಯೇ ಮಜ್ಬೂರಿ..’ ಗೀತೆಯ ರಿಮಿಕ್ಸ್​ ಆಗಿರುವ ಈ ಹಾಡಿನಲ್ಲಿ ಅವರು ಹಾಟ್​ ಆಗಿ ಸೀರೆ ಉಟ್ಟು ಕಾಣಿಸಿಕೊಂಡಿದ್ದರು. ಉರ್ಫಿ ಜಾವೇದ್​ ಅವರು ಈ ರೀತಿ ಬಟ್ಟೆ ಧರಿಸುವ ಮೂಲಕ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎಂದು ಕೇಸ್​ ಕೂಡ ಹಾಕಲಾಗಿತ್ತು. ಯಾರು ಎಷ್ಟೋ ಟ್ರೋಲ್​ ಮಾಡಿದರೂ ಉರ್ಫಿ ಜಾವೇದ್​ ಅವರು ತಲೆ ಕೆಡಿಸಿಕೊಂಡವರಲ್ಲ. ಪ್ರತಿ ದಿನ ಅವರು ಚಿತ್ರ-ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಪೋಸ್​ ನೀಡುತ್ತಾರೆ. ಅವರ ಫೋಟೋಗಳು ಸೋಶಿಯಲ್​ ಮಿಡಿಯಾದಲ್ಲಿ ವೈರಲ್​ ಆಗುತ್ತಲೆ ಇವೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here