Home Uncategorized Pravaig Defy: ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ನೀಡುವ ಪ್ರವೇಗ್ ಡಿಫೈ ಎಲೆಕ್ಟ್ರಿಕ್ ಕಾರು...

Pravaig Defy: ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ನೀಡುವ ಪ್ರವೇಗ್ ಡಿಫೈ ಎಲೆಕ್ಟ್ರಿಕ್ ಕಾರು ಬಿಡುಗಡೆ

11
0

ಸ್ಟಾರ್ಟ್ಅಪ್ ಕಂಪನಿಯಾಗಿರುವ ನಮ್ಮ ಬೆಂಗಳೂರಿನ ಪ್ರವೇಗ್ ಡೈನಾಮಿಕ್(Pravaig Dynamics) ಕಂಪನಿಯು ಎಲೆಕ್ಟ್ರಿಕ್ ಕಾರುಗಳ(Electric Cars) ಉತ್ಪಾದನೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಇದೀಗ ವಿನೂತನ ತಂತ್ರಜ್ಞಾನ ಪ್ರೇರಿತ ಡಿಫೈ(Defy) ಎಲೆಕ್ಟ್ರಿಕ್ ಎಸ್ ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 39.50 ಲಕ್ಷ ಬೆಲೆ ಹೊಂದಿದೆ.

2021ರಲ್ಲಿ ಮೊದಲ ಬಾರಿಗೆ ತನ್ನ ಹೊಸ ಎಕ್ಸ್ಟಿಷನ್ ಎಂಕೆ1(Extinction MK1) ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಅನಾವರಣಗೊಳಿಸಿದ್ದ ಪ್ರವೇಗ್ ಕಂಪನಿಯು ಇದೀಗ ಹೊಸ ಡಿಫೈ ಎಸ್ ಯುವಿಯನ್ನು ಬಿಡುಗಡೆ ಮಾಡಿದ್ದು, ಹೊಸ ಎಸ್ ಯುವಿಯು ಕಟಿಂಗ್ ಎಡ್ಜ್ ವಿನ್ಯಾಸದೊಂದಿಗೆ ಹಲವಾರು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಬ್ಯಾಟರಿ ಮತ್ತು ಮೈಲೇಜ್

ಹೊಸ ಡಿಫೈ ಎಲೆಕ್ಟ್ರಿಕ್ ಎಸ್ ಯುವಿ ಇವಿ ಕಾರು 90.9kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು ಪ್ರತಿ ಚಾರ್ಜ್ ಗೆ 500 ಕಿ.ಮೀ ಅಧಿಕ ಮೈಲೇಜ್ ನೀಡಲಿದೆ. ಹೊಸ ಕಾರಿನಲ್ಲಿ ಕಂಪನಿಯು 7.2kW ಹೋಂ ಚಾರ್ಜರ್ ಸ್ಟ್ಯಾಂಡರ್ಡ್ ಆಗಿ ನೀಡಲಿದ್ದು, ಇದು 150kW ಡಿಸಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಹೊಂದಿದೆ. ಹೋಂ ಚಾರ್ಜರ್ ಮೂಲಕ ಸತತ 8 ಗಂಟೆ ಚಾರ್ಜ್ ಮೂಲಕ ಗರಿಷ್ಠ 300 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗಲಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಟೊಯೊಟಾ ಇನೋವಾ ಹೈಕ್ರಾಸ್ ಅನಾವರಣ

ಪರ್ಫಾಮೆನ್ಸ್

ಹೊಸ ಕಾರು ಸುಮಾರು 407 ಹಾರ್ಸ್ ಪವರ್ ಮತ್ತು 620 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಗಂಟೆಗೆ 200 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದೆ. ಈ ಮೂಲಕ ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯುವ ಹೊಸ ಇವಿ ಎಸ್ ಯುವಿ ಕಾರು ಕೇವಲ 5.4 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳಲಿದ್ದು, ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರಲಿದೆ.

ಡಿಸೈನ್ ಮತ್ತು ಫೀಚರ್ಸ್

ಪ್ರವೇಗ್ ಹೊಸ ಡಿಫೈ ಕಾರು ರೇಂಜ್ ರೋವರ್ ಐಷಾರಾಮಿ ಕಾರುಗಳಂತೆ ವಿನ್ಯಾಸ ಹೊಂದಿದ್ದು, ಲೈಟ್ ಬಾರ್ ಸ್ಟೈಲ್ ಹೆಡ್ ಲೈಟ್, ಕೂಪೆ ಮಾದರಿಯಲ್ಲಿ ವಿಂಡ್ ಸ್ಕ್ರೀನ್, ದೊಡ್ಡದಾದ ಪನೊರಮಿಕ್ ಸನ್ ರೂಫ್, ರೂಫ್ ಮೌಂಟೆಡ್ ಸ್ಪಾಯ್ಲರ್, ಲೈಟ್ ಬಾರ್ ಸ್ಟೈಲ್ ಟೈಲ್ ಗೇಟ್, ಸ್ಯಾಜಿ ಡಿಸೈನ್ ಹೊಂದಿರುವ ಅಲಾಯ್ ವ್ಹೀಲ್ ಸೌಲಭ್ಯ ಹೊಂದಿದೆ.

ಹಾಗೆಯೇ ಹೊಸ ಕಾರಿನಲ್ಲಿ ಆಕರ್ಷಕವಾದ ಡ್ಯಾಶ್‌ಬೋರ್ಡ್, ಸ್ಪೋರ್ಟಿಯಾಗಿರುವ ಸ್ಟೀರಿಂಗ್ ವ್ಹೀಲ್, 15.6 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಡಿಸ್ಪೇ, ಪ್ರೀಮಿಯಂ ಆಡಿಯೋ ಸಿಸ್ಟಂ, ಏರ್ ಪ್ಯೂರಿಫೈರ್, ಮಲ್ಟಿಪಲ್ ಯುಎಸ್ ಬಿ ಚಾರ್ಜಿಂಗ್ ಪೋರ್ಟ್, ವೈರ್ ಲೆಸ್ ಚಾರ್ಜಿಂಗ್, ಅರಾಮದಾಯಕವಾದ ಆಸನ ಸೌಲಭ್ಯ, ವೆಹಿಕಲ್ ಮ್ಯಾನೆಜ್‌ಮೆಂಟ್ ಸಿಸ್ಟಂ ಜೊತೆಗೆ ಅತ್ಯುತ್ತಮ ಬೂಟ್‌ಸ್ಪೆಸ್ ಸೇರಿ ಹಲವು ಆಕರ್ಷಕ ತಾಂತ್ರಿಕ ಸೌಲಭ್ಯಗಳಿರಲಿವೆ. ಇನ್ನು ಪ್ರವೇಗ್ ಡಿಫೈ ಇವಿ ಕಾರು ಫುಲ್ ಸೈಜ್ ಎಸ್ ಯುವಿ ಮಾದರಿಯಾಗಿದ್ದು, ಇದು 4.94 ಮೀಟರ್ ಉದ್ದ, 1.65 ಮೀಟರ್ ಎತ್ತರ, 1.94 ಮೀಟರ್ ಅಗಲ ಮತ್ತು 234 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಇದನ್ನೂ ಓದಿ: ವಿಸ್ತರಿತ ಬ್ಯಾಟರಿ ಪ್ಯಾಕ್ ಪ್ರೇರಿತ ಹೊಸ ಟಾಟಾ ಟಿಗೋರ್ ಇವಿ ಬಿಡುಗಡೆ

ವಿತರಣೆ ಅವಧಿ

ಹೊಸ ಕಾರು ಮಾದರಿಯನ್ನು ಪ್ರವೇಗ್ ಕಂಪನಿಯು ಸದ್ಯಕ್ಕೆ ಬಿಡುಗಡೆ ಮಾಡುವ ಮೂಲಕ ರೂ. 51 ಸಾವಿರ ಮುಂಗಡದೊಂದಿಗೆ ಬುಕಿಂಗ್ ಆರಂಭಿಸಿದ್ದು, 2023ರ ಏಪ್ರಿಲ್ ನಲ್ಲಿ ಕಾರಿನ ವಿತರಣೆ ಮಾಡುವುದಾಗಿ ಭರವಸೆ ನೀಡಿದೆ.

LEAVE A REPLY

Please enter your comment!
Please enter your name here