Home ಕರ್ನಾಟಕ ಹೊಸದುರ್ಗ: ಇಬ್ಬರು ವಲಸೆ ಕಾರ್ಮಿಕರ ಮೃತದೇಹಗಳು ರೈಲ್ವೆ ಹಳಿಯಲ್ಲಿ ಪತ್ತೆ

ಹೊಸದುರ್ಗ: ಇಬ್ಬರು ವಲಸೆ ಕಾರ್ಮಿಕರ ಮೃತದೇಹಗಳು ರೈಲ್ವೆ ಹಳಿಯಲ್ಲಿ ಪತ್ತೆ

34
0

ಕಾಸರಗೋಡು: ಇಬ್ಬರು ವಲಸೆ ಕಾರ್ಮಿಕರ ಮೃತದೇಹವು ಹೊಸದುರ್ಗ ಸಮೀಪ ದ ರೈಲು ಹಳಿಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಮೃತರನ್ನು ಪಶ್ಚಿಮ ಬಂಗಾಳ ಮೂಲದ ಸಂತು ಮಾಲಿಕ್ (32) ಮತ್ತು ಫಾರೂಕ್ ಶೇಖ್(23) ಎಂದು ಗುರುತಿಸಲಾಗಿದೆ.

ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸ ಮಾಡುತ್ತಿದ್ದ ಇವರು ಹೊಸದುರ್ಗ ಕೊಳವಯಲಿನ ಕ್ವಾಟ್ರಸ್ನಲ್ಲಿ ವಾಸವಾಗಿದ್ದರು. ಮೃತದೇಹಗಳ ಬಳಿ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಫೋನ್ ಹುಡಿ ಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆಯೆನ್ನಲಾಗಿದೆ. ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ರೈಲು ಬಡಿದು ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಹೊಸದುರ್ಗ ಠಾಣಾ ಪೊಲೀಸರು ಮಹಜರು ನಡೆಸಿದರು.

LEAVE A REPLY

Please enter your comment!
Please enter your name here