ಕೊಟ್ಟಾಯಂ:
‘ಚಿತಿರಾ ಅತ್ತತಿರುಣಾಳ್’ ಹಬ್ಬದ ಅಂಗವಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಗುರುವಾರ ಸಂಜೆ ತೆರೆಯಲಿದೆ.
ಮುಖ್ಯ ಅರ್ಚಕ ಕೆ ಸುಧೀರ್ ನಂಬೂತಿರಿ, ತಂತ್ರಿ ಕಂದರಾರು ರಾಜೀವಾರು ಸಂಜೆ ಗರ್ಭಗುಡಿಯನ್ನು ತೆರೆಯಲಿದ್ದು, ಮರುದಿನ ಬೆಳಿಗ್ಗೆ ಪೂಜೆ ವಿಧಿ-ವಿಧಾನಗಳು ಆರಂಭವಾಗಲಿವೆ.
ಅಥಳಪೂಜೆ (ರಾತ್ರಿ ಪೂಜೆ) ನಂತರ ಶುಕ್ರವಾರ ದೇವಾಲಯ ಮುಚ್ಚಲಿದೆ. ಈ ದಿನಗಳಲ್ಲಿ ದೇವಾಲಯಕ್ಕೆ ಭಕ್ತರನ್ನು ಅನುಮತಿಸಲಾಗುವುದಿಲ್ಲ.
ದೇವಾಲಯ ನವೆಂಬರ್ 15 ರಂದು ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಗಾಗಿ ಮತ್ತೆ ತೆರೆಯಲಿದೆ.ವರ್ಚುವಲ್ ಸರತಿ ಸಾಲು ವ್ಯವಸ್ಥೆಯ ಮೂಲಕ ದರ್ಶನಕ್ಕಾಗಿ ಕಾಯ್ದಿರಿಸಿದ ಭಕ್ತರಿಗೆ ನ 16 ರಿಂದ ಬೆಟ್ಟದ ದೇಗುಲಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುವುದು.