ಬೆಂಗಳೂರು:
ನಿನ್ನೆ ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸಲು ಹೋಗಿ ಸುಮಾರು 10 ಮಕ್ಕಳು ಗಾಯಗೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಿದ್ದರೂ, ಹಾನಿ ಸಂಭವಿಸಿದೆ. ನಿನ್ನೆ ಸುಮಾರು 10 ಮಕ್ಕಳು ಗಾಯಗೊಂಡಿದ್ದು, ನಗರದ ಮಿಂಟೋ ಆಸ್ಪತ್ರೆ, ನಾರಾಯಣ ಆಸ್ಪತ್ರೆ, ನೇತ್ರಧಾಮ ಸೇರಿ ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪೈಕಿ ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಇನ್ನೂ, ವಿಜಯನಂದ ನಗರದ 12 ವರ್ಷದ ಬಾಲಕನಿಗೆ ಫ್ಲವರ್ ಪಾಟ್ ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿದ್ದು, ಮಿಂಟೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಎಲ್ಲಾ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.