Home ಬೆಂಗಳೂರು ನಗರ ಕರ್ನಾಟಕದಲ್ಲಿ ಮೇ 12ರವರೆಗೆ 14 ದಿನ ಕೋವಿಡ್ ಕರ್ಫ್ಯೂ ಜಾರಿ

ಕರ್ನಾಟಕದಲ್ಲಿ ಮೇ 12ರವರೆಗೆ 14 ದಿನ ಕೋವಿಡ್ ಕರ್ಫ್ಯೂ ಜಾರಿ

72
0

ಸಾರ್ವಜನಿಕರು ಪ್ರತಿ ದಿನ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ಒಳಗೆ ಅಗತ್ಯ ವಸ್ತುಗಳನ್ನು ಖರೀದಿಸಬಹುದು

ಬೆಂಗಳೂರು:

ಕರ್ನಾಟಕದಲ್ಲಿ ಕೋವಿಡ್ ಕರ್ಫ್ಯೂ ಜಾರಿಗೆ ಬಂದಿದೆ. ರಾತ್ರಿ 9ರಿಂದ ಕೋವಿಡ್ ಕರ್ಫ್ಯೂ ಆರಂಭವಾಗಿದ್ದು, ಮೇ 12ರವರೆಗೆ 14 ದಿನ ಜಾರಿಯಲ್ಲಿರಲಿದೆ.

ಸಾರ್ವಜನಿಕರು ಪ್ರತಿ ದಿನ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ಒಳಗೆ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಆ ಬಳಿಕ ಎಲ್ಲ ವ್ಯಾಪಾರಸ್ಥರು ಅಂಗಡಿಗಳ ಬಾಗಿಲು ಹಾಕಿಕೊಂಡು ಹೋಗಬೇಕು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಜನರಿಗೆ ಮನವಿ ಮಾಡಿ ಪೊಲೀಸರ ಮಧ್ಯಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಮತ್ತೆ 17,550 ಹೊಸ ಕೋವಿಡ್ -19 ಪ್ರಕರಣಗಳು 97 ಸಂಬಂಧಿತ ಸಾವುನೋವುಗಳು ಮತ್ತು ಕರ್ನಾಟಕ ರಾಜ್ಯದಲ್ಲಿ 180 ಸಾವುಗಳೊಂದಿಗೆ 31,830, ಪ್ರಕರಣಗಳು ವರದಿಯಾಗಿದೆ.

LEAVE A REPLY

Please enter your comment!
Please enter your name here