Home ಬೆಂಗಳೂರು ನಗರ Karnataka: 15 ದಿವಸದಲ್ಲಿ ಆರ್ಬಿಟ್ರೇಷನ್ ಪ್ರಕರಣಗಳಲ್ಲಿ ಮಾರ್ಗದರ್ಶಿ ಸೂತ್ರ ಅಂತಿಮ; ವ್ಯಾಜ್ಯ ನಿರ್ವಹಣೆ ಅಧಿನಿಯಮ ಸರ್ಕಾರಿ...

Karnataka: 15 ದಿವಸದಲ್ಲಿ ಆರ್ಬಿಟ್ರೇಷನ್ ಪ್ರಕರಣಗಳಲ್ಲಿ ಮಾರ್ಗದರ್ಶಿ ಸೂತ್ರ ಅಂತಿಮ; ವ್ಯಾಜ್ಯ ನಿರ್ವಹಣೆ ಅಧಿನಿಯಮ ಸರ್ಕಾರಿ ವಕೀಲರ ಹೊಣೆಗಾರಿಕೆ ನಿಗದಿ-ಎಚ್.ಕೆ.ಪಾಟೀಲ

22
0
15 Days Guidelines Final in Arbitration Cases: Karnataka Minister HK Patil
15 Days Guidelines Final in Arbitration Cases: Karnataka Minister HK Patil

ಬೆಂಗಳೂರು:

ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ಅಧಿನಿಯಮ2023 ನ್ನು ವಿಧಾನ ಮಂಡಲದ ಕಳೆದ ಅಧಿವೇಶನದಲ್ಲಿ ಅಂಗೀಕರಿಸಲಾಗಿದ್ದು ಸರ್ಕಾರಿ ವ್ಯಾಜ್ಯ ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ಒಂದು ದಿಕ್ಸೂಚಿ ಅಥವಾ ನಿರ್ದೇಶನ ರಹಿತ ರೀತಿಯಲ್ಲಿ ನಡೆಯುತ್ತಿತ್ತು. ಕೇವಲ ಸುತ್ತೋಲೆಗಳು ಸರ್ಕಾರಿ ಆದೇಶಗಳು ನಿಯಮಗಳು ಪರಿಣಾಮರಹಿತವಾಗಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಕರ್ನಾಟಕ ವಿಧಾನ ಮಂಡಲದಲ್ಲಿ ಸರ್ಕಾರಿ ವ್ಯಾಜ್ಯಗಳ ನಿರ್ವಹಣಾ ಅಧಿನಿಯಮವನ್ನು ಜಾರಿಗೆ ತಂದು ಸರ್ಕಾರಿ ವಕೀಲರ ಕಾರ್ಯನಿರ್ವಹಣೆಯನ್ನು ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ವಿಧಾಯಿಸ (Codify) ಲಾಗಿದೆ. ಇದರಿಂದ ಸರ್ಕಾರದ ವ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಮತ್ತು ಜನಹಿತ ಮತ್ತು ಸರ್ಕಾರದ ಹಿತಾಸಕ್ತಿಯನ್ನು ಅತ್ಯುನ್ನತವೆಂದು ಭಾವಿಸಿ, ಪುನರವ್ಯಾಖ್ಯಾನ ಮಾಡಿ, ಹೊಣೆಗಾರಿಕೆ ಮತ್ತು ಜವಬ್ದಾರಿಗಳನ್ನು ಜಾರಿಗೆ ತಂದಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಕರ್ನಾಟಕ ಉಚ್ಛ ನ್ಯಾಯಾಲಯದ ಸರ್ಕಾರಿ ವಕೀಲರುಗಳ ಸಮ್ಮೇಳನದಲ್ಲಿ ಇಂದು ತಿಳಿಸಿದರು.

ವಿಧಾನಸೌಧದ 3ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ಈ ವಕೀಲರುಗಳ ಸಮ್ಮೇಳನದಲ್ಲಿ ಕಳೆದ ಐದಾರು ವರ್ಷಗಳಲ್ಲಿ ಕರ್ನಾಟಕ ಸರ್ಕಾರ ಮತ್ತು ಇತರ ಸರ್ಕಾರಿ ಸಂಸ್ಥೆಗಳು ರಾಜ್ಯದಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಶೇ75 ರಷ್ಟು ಪ್ರಕರಣಗಳನ್ನು ಸೋತಿವೆ ಅಥವಾ ಸರ್ಕಾರದ ವಿರುದ್ದ ಆದೇಶಗಳಾಗಿವೆ. ಕ್ರಿಮಿನಲ್ ಪ್ರಕರಣಗಳಲ್ಲಿ ಶೇ ೯೫ಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ ಕರ್ನಾಟಕ ಸರ್ಕಾರ ಸೋಲು ಅನುಭವಿಸಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ. ಸರ್ಕಾರಿ ಮೇಲ್ಮನವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳಗೊಂಡು ವೆಚ್ಚದಾಯಕ ವ್ಯವಸ್ಥೆಯನ್ನು ರೂಪಿಸಿದೆ.

WhatsApp Image 2023 08 26 at 7.54.26 PM

ರಾಜ್ಯದ ಜಿಲ್ಲಾ, ತಾಲ್ಲೂಕು ಮತ್ತು ಇತರ ನ್ಯಾಯಾಲಯಗಳಲ್ಲಿ ಹೈಕೋರ್ಟ್ ವರೆಗೆ ಪ್ರಸ್ತುತ 21.4 ಲಕ್ಷ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಕೆಳ ಹಂತದ ನ್ಯಾಯಾಲಯದಲ್ಲಿ 18.9 ಲಕ್ಷ ಪ್ರಕರಣಗಳಿದ್ದರೆ 2.50 ಲಕ್ಷ ಪ್ರಕರಣಗಳು ಹೈಕೋರ್ಟ್ನಲ್ಲಿವೆ. 1626 ಪ್ರಕರಣಗಳು 20 ರಿಂದ 3೦ ವರ್ಷದ ಹಳೆಯವಾಗಿದ್ದರೆ, ೩೦ ವರ್ಷಕ್ಕಿಂತ ಹೆಚ್ಚು ಹಳೆಯದಾದ ಪ್ರಕರಣಗಳು ೧೭೨ ಇವೆ ಎಂದು ಸಚಿವರು ವಕೀಲರುಗಳ ಸಮ್ಮೇಳನದಲ್ಲಿ ವಿವರಿಸಿದರು.

ಪ್ರಕರಣಗಳಲ್ಲಿ ಸೋಲು

ಉಂಟಾಗುತ್ತಿರುವುದರಿAದ ಸರ್ಕಾರದಿಂದ ಅಮೂಲ್ಯವಾದಂತಹ ಆಸ್ತಿ ಮತ್ತು ತೆರಿಗೆದಾರರ ಹಣ ವೆಚ್ಚವಾಗುತ್ತಿರುವುದನ್ನು ಗಮನಿಸಿ ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ನ್ಯಾಯಾಲಯಗಳು ಮತ್ತು ಶಾಸನಬದ್ಧ ನ್ಯಾಯಾಧಿಕರಣಗಳ ಮುಂದೆ ಸರ್ಕಾರಿ ವ್ಯಾಜ್ಯಗಳು ನಡೆಸುವ ಕುರಿತಂತೆ ನಿಯಮಗಳು, ಆದೇಶಗಳು, ಅಧಿಸೂಚನೆಗಳು, ಸುತ್ತೋಲೆಗಳು ಮುಂತಾದ ದಿಕ್ಸೂಚಿ ರಹಿತ ನಿರ್ದೇಶನಗಳನ್ನು ಈ ಕಾನೂನಿನ ಮೂಲಕ ಬದಲಾಯಿಸಲಾಗಿದೆ. ವ್ಯಾಜ್ಯಗಳಲ್ಲಿ ಸರ್ಕಾರಿ ವಕೀಲರು ಮೌಖಿಕ ವಾದ-ಪ್ರತಿವಾದಗಳ ಜೊತೆಗೆ ಲಿಖಿತ ಮೂಲಕವಾದ ವಾದ-ಪ್ರತಿವಾದಗಳ ಸಲ್ಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಇಂಥ ಲಿಖಿತವಾದ ವಾದ-ಪ್ರತಿವಾದಗಳ ಸಲ್ಲಿಕೆಯನ್ನು ಮಾಡುವ ಮೊದಲು ಒಂದು ಪ್ರಕ್ರಿಯೆಯನ್ನು ವ್ಯಾಖ್ಯಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಆರ್ಬಿಟ್ರೇಷನ್ ಪ್ರಕರಣಗಳಲ್ಲಿ ಹಲವಾರು ರೀತಿಯ ಲೋಪಗಳು ವ್ಯತ್ಯಯಗಳು ಆಗುತ್ತಿರುವುದರಿಂದ ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಮತ್ತು ಸರ್ಕಾರಿ ವಕೀಲರು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಕಾಲಕ್ಕೆ ಸಲ್ಲಿಸುವಂತೆ ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ಆರ್ಬಿಟ್ರೇಷನ್ ಪ್ರಕರಣಗಳಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಇತರ ಸಂಬAಧಪಟ್ಟವರೊAದಿಗೆ ಇನ್ನೂ ೧೫ ದಿವಸದಲ್ಲಿ ಚರ್ಚಿಸಿ ಮಾರ್ಗದರ್ಶಿ ಸೂತ್ರಗಳನ್ನು ನಿರ್ಣಯಿಸಲಾಗುವುದೆಂದು ಸಚಿವರು ವಿವರಿಸಿದರು.

ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಯವರು ಪಾಲ್ಗೊಂಡಿದ್ದರು.

ಸಮ್ಮೇಳನದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿಯವರು 3 ವರ್ಷದ ತಮ್ಮ ರಾಜಕೀಯ ಜೀವನದಲ್ಲಿ ಹಾಗೂ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ತಾವು ಸರ್ಕಾರಿ ವಕೀಲರುಗಳ ಇಂಥ ಸಮ್ಮೇಳನವನ್ನು ನಡೆಸಿ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಯವರು ಹಾಗೂ ಕಾನೂನು ಸಚಿವರೊಂದಿಗೆ ಸಂವಾದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಇದೇ ಮೊದಲ ಬಾರಿ ಎಂದು ಕಾನೂನು ಸಚಿವರ ಕ್ರಮವನ್ನು ಶ್ಲಾಘಿಸಿದರು. ಏನು ಮಾಡಬೇಕು, ಇಂದೇ ಮಾಡಿ ನಾಳೆ ಯಾರಾದರೂ ಇಂಥದನ್ನು ಮಾಡಬಾರದು ಎಂಬ ಕಾನೂನು ರಚನೆ ಮಾಡಿಯಾರು ಎಂದು ನಾಣ್ಣುಡಿ ಇದೆ. ಅದಕ್ಕಾಗಿ ಇಂಥ ಕೆಲಸಗಳನ್ನು ಮಾಡುವಾಗ ನಾವು ಹಿಂದೆ ಮುಂದೆ ನೋಡದೇ ಮಾಡಬೇಕು ಎಂದರು. ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ಕಾನೂನು ಬಂದಿರುವುದೂ ಸಹ ಅತ್ಯಂತ ಶ್ಲಾಘನೀಯ ಎಂದು ಉಪ ಮುಖ್ಯಮಂತ್ರಿಯವರು ಸಂತಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here