Home ಬೆಂಗಳೂರು ನಗರ Bengaluru: ಜುಲೈ ಒಂದೇ ತಿಂಗಳಿನಲ್ಲಿ 18 ಕೋಟಿ ಮೌಲ್ಯದ 1,785 ಕೆಜಿ ಡ್ರಗ್ಸ್ ವಶಕ್ಕೆ, 487...

Bengaluru: ಜುಲೈ ಒಂದೇ ತಿಂಗಳಿನಲ್ಲಿ 18 ಕೋಟಿ ಮೌಲ್ಯದ 1,785 ಕೆಜಿ ಡ್ರಗ್ಸ್ ವಶಕ್ಕೆ, 487 ಬಂಧನ

16
0
1,785 kg of drugs worth Rs 18 crore seized in single month of July, 487 arrested 1,785 kg of drugs worth Rs 18 crore seized in single month of July, 487 arrested
1,785 kg of drugs worth Rs 18 crore seized in single month of July, 487 arrested
Advertisement
bengaluru

ಬೆಂಗಳೂರು:

ಡ್ರಗ್ಸ್ ವಿರುದ್ಧ ಬೆಂಗಳೂರು ಪೊಲೀಸರು ಸಮರ ಸಾರಿದ್ದು. ಜುಲೈ ಒಂದೇ ತಿಂಗಳಿನಲ್ಲಿ ಬರೋಬ್ಬರಿ 18 ಕೋಟಿ ಮೌಲ್ಯದ 1785 ಕೆ.ಜಿ. ತೂಕದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ‘ಡ್ರಗ್ಸ್‌ಗೆ ಸಂಬಂಧಪಟ್ಟಂತೆ ನಗರದ 8 ವಿಭಾಗಗಳ ವ್ಯಾಪ್ತಿಯ ಠಾಣೆಗಳಲ್ಲಿ 378 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 487 ಆರೋಪಿಗಳನ್ನು ಬಂಧಿಸಲಾಗಿದ್ದು, ಇದರಲ್ಲಿ 13 ವಿದೇಶಿಯರಿದ್ದಾರೆ’ ಎಂದು ಹೇಳಿದರು.

ಮಾದಕ ವಸ್ತು ಸೇವನೆ ಹಾಗೂ ಮಾರಾಟ ಮಾಡುವವರ ವಿರುದ್ಧ ತಿಂಗಳಲ್ಲಿ 378 ಕೇಸ್ ಹಾಕಲಾಗಿದ್ದು, 474 ಭಾರತೀಯರು ಹಾಗೂ 13 ವಿದೇಶಿ ಪ್ರಜೆಗಳನ್ನ ಬಂಧಿಸಲಾಗಿದೆ.

bengaluru bengaluru

72 ಪ್ರಕರಣಗಳಲ್ಲಿ ಡ್ರಗ್ಸ್ ಪೆಡ್ಲರ್ ಗಳ‌ ಮೇಲೆ 306 ಪ್ರಕರಣಗಳಲ್ಲಿ ಡ್ರಗ್ಸ್ ಸೇವನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಕ್ರಮವಾಗಿ ನೆಲೆಸಿದ್ದ 11 ಜನ ವಿದೇಶಿಯರನ್ನ ಗಡಿಪಾರು ಮಾಡಲಾಗಿದೆ‌. ವಶಪಡಿಸಿಕೊಂಡ ಡ್ರಗ್ ನಲ್ಲಿ 1,723 ಕೆ.ಜಿ. ಅಫೀಮು, 55,895 ಕೆ.ಜಿ. ಹೆರಾಯಿನ್, 40 ಗ್ರಾಂ ಹಾಶಿಶ್ ಆಯಿಲ್, 1.026 ಕೆ.ಜಿ. ಚರಸ್, 467 ಗ್ರಾಂ, ಸೇರಿದಂತೆ 572 ವಿವಿಧ ರೀತಿಯ ಮಾತ್ರೆಗಳು 43 ಎಲ್ ಎಸ್ ಡಿ ಸ್ಟಿಪ್ಸ್ ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ.


bengaluru

LEAVE A REPLY

Please enter your comment!
Please enter your name here