2017ರಲ್ಲಿ ಸುರಿದ ಭಾರಿ ಮಳೆಗೆ ಕೊಚ್ಚಿ ಹೋಗಿದ್ದ ಜೆಸಿಬಿ ನಿರ್ವಾಹಕನ ಮರಣ ಪ್ರಮಾಣ ಪತ್ರ ನೀಡದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್ 30 ದಿನಗಳೊಳಗೆ ಮೃತನ ಸಂಬಂಧಿಕರಿಗೆ ದಾಖಲೆ ನೀಡುವಂತೆ ಮಹಾನಗರ ಪಾಲಿಕೆಗೆ ಆದೇಶಿಸಿದೆ. ಬೆಂಗಳೂರು: 2017ರಲ್ಲಿ ಸುರಿದ ಭಾರಿ ಮಳೆಗೆ ಕೊಚ್ಚಿ ಹೋಗಿದ್ದ ಜೆಸಿಬಿ ನಿರ್ವಾಹಕನ ಮರಣ ಪ್ರಮಾಣ ಪತ್ರ ನೀಡದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್ 30 ದಿನಗಳೊಳಗೆ ಮೃತನ ಸಂಬಂಧಿಕರಿಗೆ ದಾಖಲೆ ನೀಡುವಂತೆ ಮಹಾನಗರ ಪಾಲಿಕೆಗೆ ಆದೇಶಿಸಿದೆ.
ಮೃತ ಶಾಂತಕುಮಾರ್ ಮೃತದೇಹ ಇಂದಿಗೂ ಪತ್ತೆಯಾಗಿಲ್ಲ. ಇನ್ನು ಬಿಬಿಎಂಪಿಯು ಶಾಂತಕುಮಾರ್ ಪತ್ನಿ ಸರಸ್ವತಿಗೆ ಪರಿಹಾರವನ್ನು ನೀಡಿದ್ದರೂ, ಮರಣ ಪ್ರಮಾಣಪತ್ರವನ್ನು ನೀಡಲು ನಿರಾಕರಿಸಿತು. ಸಾವಿನ ಕಾರಣವನ್ನು ವೈದ್ಯರು ಪ್ರಮಾಣೀಕರಿಸದೆ ಮರಣ ಪ್ರಮಾಣಪತ್ರ ನೀಡಲು ಆಗಲ್ಲ ಎಂದು ಹೇಳಿದರು.
ಕಾರ್ಯವಿಧಾನಕ್ಕೆ ಅಂಟಿಕೊಳ್ಳುವ ಬಿಬಿಎಂಪಿಯ ಕ್ರಮವು ತರ್ಕಬದ್ಧವಲ್ಲ ಎಂದು ಹೇಳಿರುವ ಹೈಕೋರ್ಟ್, ಮೃತದೇಹ ಸಿಗದಿದ್ದಾಗ, ನಮೂನೆ 4A ಪ್ರಕಾರ ಪ್ರಮಾಣಪತ್ರವನ್ನು ಒತ್ತಾಯಿಸುವ ಪ್ರತಿವಾದಿಯ ಪ್ರಶ್ನೆಯು ಸಂಪೂರ್ಣವಾಗಿ ತರ್ಕಬದ್ಧವಲ್ಲ ಮತ್ತು ಅದನ್ನು ಎಂದಿಗೂ ಸಮಾಧಾನಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
2017ರ ಮೇ 20ರಂದು ಚರಂಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಭಾರೀ ಮಳೆಯಲ್ಲಿ ಶಾಂತಕುಮಾರ್ ಕೊಚ್ಚಿಹೋಗಿದ್ದರು. ಇನ್ನು ಪತಿಯ ಮರಣ ಪ್ರಮಾಣಪತ್ರ ನೀಡಿಲ್ಲ ಎಂದು ಆರೋಪಿ ಸರಸ್ವತಿ ಹೈಕೋರ್ಟ್ ಮೆಟ್ಟಿಲೇರಿದ್ದು ಇಂದು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ನಡೆಸಿತು.
ಇದನ್ನೂ ಓದಿ: ರಾಜಕಾಲುವೆ, ಕೆರೆ ಒತ್ತುವರಿ ಪ್ರಕರಣ: ತೆರವುಗೊಳಿಸಲು ಕಾಲಾನುಕ್ರಮ ರೂಪಿಸಿ ಹೈಕೋರ್ಟ್’ಗೆ ಕ್ರಿಯಾಯೋಜನೆ ಸಲ್ಲಿಸಿದ ಬಿಬಿಎಂಪಿ
ಬಿಬಿಎಂಪಿ ಸರಸ್ವತಿಗೆ ಪರಿಹಾರವಾಗಿ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಘಟನೆ ಕುರಿತು ತನಿಖೆ ನಡೆಸಿದ ಮಹಾಲಕ್ಷ್ಮೀಪುರಂ ಪೊಲೀಸರು ಶಾಂತಕುಮಾರ್ ಶವ ಪತ್ತೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. BBMP ಮರಣ ಪ್ರಮಾಣಪತ್ರಗಳನ್ನು ಕರ್ನಾಟಕ ಜನನ ಮತ್ತು ಮರಣಗಳ ನೋಂದಣಿ ನಿಯಮಗಳ ಅಡಿಯಲ್ಲಿ ನಮೂನೆ 4 ಅಥವಾ 4Aನಲ್ಲಿ ನೀಡುತ್ತದೆ.
ನಮೂನೆ 4 ಆಸ್ಪತ್ರೆಗಳಲ್ಲಿನ ಸಾಂಸ್ಥಿಕ ಸಾವುಗಳಿಗೆ ನೀಡಲಾಗುತ್ತದೆ. ಆಸ್ಪತ್ರೆಗಳ ಹೊರಗಿನ ಸಾವುಗಳಿಗೆ, ವೈದ್ಯರು ನಮೂನೆ 4A ಅಡಿಯಲ್ಲಿ ಸಾವಿನ ಕಾರಣ ಮತ್ತು ಇತರ ಕಾರಣಗಳನ್ನು ಪ್ರಮಾಣೀಕರಿಸಬೇಕಾಗುತ್ತದೆ. ಮೃತದೇಹ ಪತ್ತೆಯಾಗದ ಕಾರಣ ಒಂದು ವೇಳೆ ಶಾಂತಕುಮಾರ್ ಜೀವಂತವಾಗಿ ಮರಳಿದರೆ ಮರಣ ಪ್ರಮಾಣ ಪತ್ರ ಸುಳ್ಳಾಗುತ್ತದೆ ಎಂದು ಬಿಬಿಎಂಪಿ ವಾದಿಸಿದೆ.
ಹೈಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ‘ಇದು ಆಧಾರರಹಿತ ವಾದ ಇದನ್ನು ತಿರಸ್ಕರಿಸಬೇಕಾಗಿದೆ. ನಿಗಮವು ತನ್ನ ನಿಷ್ಕ್ರಿಯತೆಯನ್ನು ಸಮರ್ಥಿಸಿಕೊಳ್ಳಲು ನಿಯಮಗಳನ್ನು ಹಿಡಿದಿಟ್ಟುಕೊಳ್ಳುತ್ತಿದೆ ಎಂದು ತೋರುತ್ತದೆ. ಒಂದು ವೇಳೆ ಅರ್ಜಿದಾರರ ಪತಿ ಜೀವಂತವಾಗಿ ಹಿಂದಿರುಗಿದರೆ , ಪ್ರತಿವಾದಿಯು ಯಾವಾಗಲೂ ಮರಣ ಪ್ರಮಾಣಪತ್ರವನ್ನು ರದ್ದುಗೊಳಿಸಬಹುದು ಎಂದು ಪೀಠ ಹೇಳಿದೆ. ಇನ್ನು ಪ್ರಮಾಣಪತ್ರ ನೀಡಲು ವಿಳಂಬವಾಗುತ್ತಿರುವುದಕ್ಕೆ ಬಿಬಿಎಂಪಿಯೇ ಕಾರಣ ಎಂದು ಹೈಕೋರ್ಟ್ ಆರೋಪಿಸಿದೆ.