Home Uncategorized 2022ನೇ ಸಾಲಿನ ಬೆಂಗಳೂರು ಪ್ರೆಸ್‌ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ, ಟಿವಿ9ಗೆ ಪ್ರಶಸ್ತಿಯ ಗರಿ, ಖರ್ಗೆಗೆ...

2022ನೇ ಸಾಲಿನ ಬೆಂಗಳೂರು ಪ್ರೆಸ್‌ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ, ಟಿವಿ9ಗೆ ಪ್ರಶಸ್ತಿಯ ಗರಿ, ಖರ್ಗೆಗೆ ವರ್ಷದ ವ್ಯಕ್ತಿ ಪ್ರಶಸ್ತಿ

18
0

ಬೆಂಗಳೂರು : 2022ನೇ ಸಾಲಿನ ಪ್ರೆಸ್‌ ಕ್ಲಬ್‌ ಆಫ್‌ ಬೆಂಗಳೂರು ಪ್ರಶಸ್ತಿ (Bangalore Press Club Awards 2022) ಪ್ರಕಟವಾಗಿದೆ. ಟಿವಿ9 ಸುದ್ದಿವಾಹಿನಿಯ (TV9 Kannada ) ಔಟ್‌ಪುಟ್ ಎಡಿಟರ್ ವೈ.ಎಂ.ನಾಗಭೂಷಣ್ ಹಾಗೂ ಚೀಫ್‌ ಎಕ್ಸಿಕೂಟಿವ್‌ ಪ್ರೊಡ್ಯೂಸರ್ ವಿಲಾಸ್ ನಾಂದೋಡ್ಕರ್‌ ಸೇರಿದಂತೆ ಒಟ್ಟು 33 ಜನರು 2022ನೇ ಸಾಲಿನ ಬೆಂಗಳೂರು ಪ್ರೆಸ್‌ ಕ್ಲಬ್‌ ನೀಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಬೆಂಗಳೂರು ಪ್ರೆಸ್ ಕ್ಲಬ್​ನ ವರ್ಷದ ವ್ಯಕ್ತಿ ಪ್ರಶಸ್ತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ.

2022ನೇ ಸಾಲಿನ ಬೆಂಗಳೂರು ಪ್ರೆಸ್‌ ಕ್ಲಬ್‌ ನೀಡುವ ವಾರ್ಷಿಕ ಪ್ರಶಸ್ತಿಗೆ 33 ಜನರನ್ನು ಆಯ್ಕೆ ಮಾಡಲಾಗಿದೆ. ಪ್ರೆಸ್​ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಆಯ್ಕೆ ಮಾಡಿದ್ರೆ, ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ವಿಶೇಷ ಪ್ರಶಸ್ತಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹಾಗೂ ಸಹಕಾರ ಸಚಿವ ಎಸ್​.ಟಿ. ಸೋಮಶೇಖರ್ ಅವರು ಆಯ್ಕೆಯಾಗಿದ್ದಾರೆ. ಡಿಸೆಂಬರ್‌ 31ರಂದು ಬೆಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ.

ಪ್ರೆಸ್​ ಕ್ಲಬ್ ವಾರ್ಷಿಕ ವಿಶೇಷ ಪುರಸ್ಕೃತರ ಪಟ್ಟಿ ಇಂತಿದೆ

* ಬಸವರಾಜು, * ಹನುಮೇಶ್ ಯಾವಗಲ್, * ಹೆಚ್.ಎಸ್. * ಬಲರಾಂ, * ಅಗ್ರಹಾರ ಕೃಷ್ಣಮೂರ್ತಿ, * ಗಂಗಾಧರ, * ಮೊದಲಿಯಾರ್,  * ಚೆನ್ನ ನಾಗರಾಜ್ ಎಂ., * ಶ್ರೀಧರ ಬಿ.ಎನ್, * ವಿನಯ್ .ಎಂ, * ಗೌತಮ್ ಮಾಚಯ್ಯ ಎಂ, * ರಾಜಶೇಖರ್‌ .ಎಸ್‌., * ಹೆಚ್. ಮೂರ್ತಿ , * ಸಂಗಮ್ ದೇವ್ ಐ.ಹೆಚ್, * ಮುನೀರ್ ಅಹಮದ್ ಅಬದ್,  * ಕೆ.ವಿ. ಪರಮೇಶ್ , * ಸಿ.ಎಸ್. ಬೋಪಯ್ಯ, * ಶ್ಯಾಂ ಬೋಜಕ್, * ಭಾಗ್ಯ ಪ್ರಕಾಶ್ .ಕೆ, * ಅನಿಲ್ ವಿ. ಗೆಜ್ಜೆ,  * ಗಾಯತ್ರಿ ನಿವಾಸ್, * ಶಿವಣ್ಣ, * ಶೋಭಾ ಎಂ.ಸಿ, * ದಿವಾಕರ್ .ಸಿ, * ನಾಗಭೂಷಣ್ ಮೈ.ಎಂ, * ವಿಲಾಸ್ ನಂದೂಡಕರ್, * ಇ ನಾಗರಾಜು, * ಪಿ. ರಾಜೇಂದ್ರ, * ಶಿವಾನಂದ ತಗಡೂರು ಟಿ.ವಿ., * ಶಿವಪ್ರಕಾಶ್ .ಎಸ್ ,  * ಓಂಕಾರ ಕಾಕಡೆ, * ಜಯ ಪ್ರಕಾಶ್‌ ಆರ್‌. ನರಸಿಂಹ ರಾವ್,  * ರಾಘವೇಂದ್ರ ಕೆ. (ತೋಗರ್ಸಿ), * ಗಿರಿಪ್ರಕಾಶ್ ಕೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here