Home Uncategorized 30×60 ಅಡಿಯ ಮೋದಿ ಶೈಲಿಯ ಜಾಕೆಟ್ ಹೊಲಿದ ಬೆಳಗಾವಿ ಟೈಲರ್

30×60 ಅಡಿಯ ಮೋದಿ ಶೈಲಿಯ ಜಾಕೆಟ್ ಹೊಲಿದ ಬೆಳಗಾವಿ ಟೈಲರ್

17
0
Advertisement
bengaluru

ಬೆಳಗಾವಿಯ ಟೈಲರ್ ಸಚಿನ್ ಶ್ರೀಕಾಂತ್ ಕಾಕಡೆ (48) ಎಂಬುವವರು ಇತರ 15 ಕಾರ್ಮಿಕರೊಂದಿಗೆ 30×60 ಅಡಿ ಮೋದಿ ಶೈಲಿಯ ಬೃಹತ್ ಜಾಕೆಟ್ ಮತ್ತು 1×2 ಇಂಚಿನ ಎರಡು ಸಣ್ಣದಾದ ಜಾಕೆಟ್‌ಗಳನ್ನು ಹೊಲಿದಿದಿದ್ದಾರೆ. ಇದು ವಿಶ್ವ ದಾಖಲೆಯಾಗಿದೆ ಎಂದು ಅವರು ಹೇಳಿದ್ದಾರೆ. ಬೆಳಗಾವಿ: ಬೆಳಗಾವಿಯ ಟೈಲರ್ ಸಚಿನ್ ಶ್ರೀಕಾಂತ್ ಕಾಕಡೆ (48) ಎಂಬುವವರು ಇತರ 15 ಕಾರ್ಮಿಕರೊಂದಿಗೆ 30×60 ಅಡಿ ಮೋದಿ ಶೈಲಿಯ ಬೃಹತ್ ಜಾಕೆಟ್ ಮತ್ತು 1×2 ಇಂಚಿನ ಎರಡು ಸಣ್ಣದಾದ ಜಾಕೆಟ್‌ಗಳನ್ನು ಹೊಲಿದಿದಿದ್ದಾರೆ. ಇದು ವಿಶ್ವ ದಾಖಲೆಯಾಗಿದೆ ಎಂದು ಅವರು ಹೇಳಿದ್ದಾರೆ.

ಎರಡು ಮಿನಿ ಜಾಕೆಟ್‌ಗಳನ್ನು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಸ್ಮರಣಿಕೆಯಾಗಿ ನೀಡಲಾಗುವುದು ಎಂದು ಅವರು ಹೇಳಿದರು.

ಮೋದಿ ಅಭಿಮಾನಿಯಾಗಿರುವ ಕಾಕಡೆ ಅವರು ವಾಸ್ತುಶಿಲ್ಪಿ ಅನುಪ್ ಜವಾಲ್ಕರ್ ಒದಗಿಸಿದ ವಿನ್ಯಾಸಗಳು ಮತ್ತು ಅಳತೆಗಳ ಸಹಾಯದಿಂದ ಬೃಹತ್ ಜಾಕೆಟ್ ಅನ್ನು ಹೊಲಿದಿದ್ದಾರೆ. ಗುರುವಾರ ಹುಬ್ಬಳ್ಳಿಗೆ ಭೇಟಿ ನೀಡಿದ ಮೋದಿ ಅವರನ್ನು ಸ್ವಾಗತಿಸಲು ಅವರು ಕ್ರೇನ್ ಸಹಾಯದಿಂದ ಜಾಕೆಟ್ ಅನಾವರಣ ಮಾಡಲಾಯಿತು.

ಕಾಕಡೆ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿ, ‘ಜಾಕೆಟ್ ತಯಾರಿಸಲು 1.25 ಲಕ್ಷ ರೂ. ಬೇಕಾಯಿತು. ತಮ್ಮ ಯೋಜನೆಯನ್ನು ಪೂರ್ಣಗೊಳಿಸಲು 15 ದಿನಗಳವರೆಗೆ ಬೆಳಗಾವಿಯಲ್ಲಿ ಮದುವೆ ಮಂಟಪವನ್ನು ಬಾಡಿಗೆಗೆ ತೆಗೆದುಕೊಳ್ಳಬೇಕಾಯಿತು. ಅವರು 15 ದಿನಗಳ ಕಾಲ ಮದುವೆ ಮಂಟಪದಲ್ಲಿ ಬಿಡಾರ ಹೂಡಿದ್ದ 15 ನುರಿತ ಕೆಲಸಗಾರರನ್ನು ಬಟ್ಟೆ ಹೊಲಿಯಲು ನೇಮಿಸಿಕೊಂಡರು ಎಂದಿದ್ದಾರೆ.

bengaluru bengaluru

ಜಾನ್ ಅಂಡ್ ಬ್ರೌನ್ ಸೂಟಿಂಗ್ಸ್ ಕಂಪನಿಯು ಅಗತ್ಯವಿರುವ 250 ಮೀಟರ್ ಬಟ್ಟೆಯನ್ನು ದಾನ ಮಾಡಿದೆ. ಹುಬ್ಬಳ್ಳಿಯಲ್ಲಿ ಬೃಹತ್ ಜಾಕೆಟ್ ಪ್ರದರ್ಶಿಸಲು ಸುಮಾರು 1,200 ಕೆಜಿ ತೂಕದ  ರಚನೆಯನ್ನು ತಯಾರಿಸಬೇಕಾಗಿತ್ತು. ಧಾರವಾಡದಿಂದ 75 ಸಾವಿರ ರೂ.ಗೆ ಕ್ರೇನ್ ಅನ್ನು ಬಾಡಿಗೆ ಪಡೆಯಬೇಕಾಯಿತು. ಅವುಗಳನ್ನು ಪೂರ್ಣಗೊಳಿಸಲು ತಲಾ ಎರಡು ದಿನಗಳನ್ನು ತೆಗೆದುಕೊಂಡೆ ಎಂದು ಕಾಕಡೆ ಹೇಳಿದರು.

ಆದರೆ, ಇತರ ಟೈಲರ್‌ಗಳು ದಿನಕ್ಕೆ ಐದು ಸಾಮಾನ್ಯ ಜಾಕೆಟ್‌ಗಳನ್ನು ಪೂರ್ಣಗೊಳಿಸಬಹುದು. 1×2 ಇಂಚಿನ ಜಾಕೆಟ್‌ಗಳು ಮೂರು ಪಾಕೆಟ್‌ಗಳು, ಬಟನ್‌ಗಳು ಮತ್ತು ಇತರ ಎಲ್ಲಾ ಸೂಕ್ಷ್ಮ ಡೀಟೇಲ್‌ಗಳನ್ನು ಹೊಂದಿವೆ ಎಂದು ಅವರು ಹೇಳಿದರು.


bengaluru

LEAVE A REPLY

Please enter your comment!
Please enter your name here