Home Uncategorized 31 ಬಿಡಬ್ಲ್ಯುಎಸ್‌ಎಸ್‌ಬಿ ಕೊಳಚೆ ಸಂಸ್ಕರಣಾ ಘಟಕಗಳಲ್ಲಿ ವೈಜ್ಞಾನಿಕವಾಗಿ ಕೆಲಸ ಮಾಡುವುದು ಕೇವಲ 8 ಮಾತ್ರ!

31 ಬಿಡಬ್ಲ್ಯುಎಸ್‌ಎಸ್‌ಬಿ ಕೊಳಚೆ ಸಂಸ್ಕರಣಾ ಘಟಕಗಳಲ್ಲಿ ವೈಜ್ಞಾನಿಕವಾಗಿ ಕೆಲಸ ಮಾಡುವುದು ಕೇವಲ 8 ಮಾತ್ರ!

44
0

ಬೆಂಗಳೂರಿನಲ್ಲಿರುವ 31 ಬಿಡಬ್ಲ್ಯುಎಸ್‌ಎಸ್‌ಬಿ ಕೊಳಚೆ ಸಂಸ್ಕರಣಾ ಘಟಕಗಳಲ್ಲಿ (ಎಸ್‌ಟಿಪಿ) ಕೇವಲ ಎಂಟು ಮಾತ್ರ ವೈಜ್ಞಾನಿಕವಾಗಿ ಡೇಟಾ ನಿರ್ವಹಣೆ ಮಾಡುತ್ತಿವೆ, ಉಳಿದವುಗಳಲ್ಲಿ ವ್ಯತ್ಯಾಸಗಳಿವೆ ಎಂದು ಕೆರೆಗಳ ಹೋರಾಟಗಾರ ರಾಘವೇಂದ್ರ ಪಚ್ಚಾಪುರ ಹೇಳಿದ್ದಾರೆ. ಬೆಂಗಳೂರು: ಬೆಂಗಳೂರಿನಲ್ಲಿರುವ 31 ಬಿಡಬ್ಲ್ಯುಎಸ್‌ಎಸ್‌ಬಿ ಕೊಳಚೆ ಸಂಸ್ಕರಣಾ ಘಟಕಗಳಲ್ಲಿ (ಎಸ್‌ಟಿಪಿ) ಕೇವಲ ಎಂಟು ಮಾತ್ರ ವೈಜ್ಞಾನಿಕವಾಗಿ ಡೇಟಾ ನಿರ್ವಹಣೆ ಮಾಡುತ್ತಿವೆ, ಉಳಿದವುಗಳಲ್ಲಿ ವ್ಯತ್ಯಾಸಗಳಿವೆ ಎಂದು ಕೆರೆಗಳ ಹೋರಾಟಗಾರ ರಾಘವೇಂದ್ರ ಪಚ್ಚಾಪುರ ಹೇಳಿದ್ದಾರೆ.

ಬೆಂಗಳೂರಿನಾದ್ಯಂತ ಎಲ್ಲಾ 31 ಎಸ್ ಟಿ ಪಿ ಗಳಲ್ಲಿ ಆರು ನಿಯತಾಂಕಗಳನ್ನು ಮೇಲ್ವಿಚಾರಣೆ ಮಾಡುವ ಬಿಡಬ್ಲ್ಯೂ ಎಸ್ ಸ್ ಪಿಯ ಕೊಳಚೆ ಸಂಸ್ಕರಣಾ ಘಟಕಗಳ  ಡ್ಯಾಶ್‌ಬೋರ್ಡ್‌ನಲ್ಲಿ ಲಭ್ಯವಿರುವ ಡೇಟಾವನ್ನು ನಾವು ನೋಡಿದ್ದೇವೆ. ಸೆನ್ಸಾರ್ಸ್ ಡೇಟಾವನ್ನು ಸೆರೆಹಿಡಿಯುತ್ತವೆ, ತಪ್ಪು ಡೇಟಾ ಮತ್ತು ಉಲ್ಲಂಘನೆಗಳನ್ನು ರೆಕಾರ್ಡ್ ಮಾಡಿದ್ದೇವೆ ಎಂದು ಪಚಾಪುರ್ ಹೇಳಿದರು. ಇವುಗಳಲ್ಲಿ ಕೇವಲ 8 ಮಾತ್ರ ವೈಜ್ಞಾನಿಕವಾಗಿ ಕೆಲಸ ಮಾಡುತ್ತಿವೆ ಎಂದರು.

ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷರು, ಕೆಎಸ್‌ಪಿಸಿಬಿ ಅಧ್ಯಕ್ಷರು ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯನ್ನು ಭೇಟಿ ಮಾಡಿ ಮಂಗಳವಾರ ವರದಿಯನ್ನು ಹಸ್ತಾಂತರಿಸುವುದಾಗಿ ಕಾರ್ಯಕರ್ತ ಹೇಳಿದರು. ಜಕ್ಕೂರು ಎಸ್‌ಟಿಪಿಯಲ್ಲಿ ಕೆಮಿಕಲ್‌ ಆಕ್ಸಿಜನ್‌ ಬೇಡಿಕೆ (ಸಿಒಡಿ) ಪ್ರಮಾಣ 50 ಮಿಗ್ರಾಂಗೆ 200 ಮಿಗ್ರಾಂ ಇದೆ ಎಂದು ವಿವರಣೆ ನೀಡಿದರು.

 

LEAVE A REPLY

Please enter your comment!
Please enter your name here