Home Uncategorized 4ನೇ ಮಹಡಿಯಿಂದ ಬಿದ್ದು 28 ವರ್ಷದ ಫ್ಲೈಟ್ ಅಟೆಂಡೆಂಟ್ ಸಾವು, ಪ್ರಿಯಕರನ ಬಂಧನ

4ನೇ ಮಹಡಿಯಿಂದ ಬಿದ್ದು 28 ವರ್ಷದ ಫ್ಲೈಟ್ ಅಟೆಂಡೆಂಟ್ ಸಾವು, ಪ್ರಿಯಕರನ ಬಂಧನ

7
0
bengaluru

ಶುಕ್ರವಾರ ರಾತ್ರಿ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯೊಂದರ 28 ವರ್ಷದ ಕ್ಯಾಬಿನ್ ಸಿಬ್ಬಂದಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರು: ಶುಕ್ರವಾರ ರಾತ್ರಿ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯೊಂದರ 28 ವರ್ಷದ ಕ್ಯಾಬಿನ್ ಸಿಬ್ಬಂದಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಬಲಿಯಾದ ಅರ್ಚನಾ ಧಿಮಾನ್ ಹಿಮಾಚಲ ಪ್ರದೇಶದ ಮೂಲದವರು. ಕೋರಮಂಗಲದ 8ನೇ ಬ್ಲಾಕ್‌ನಲ್ಲಿರುವ ರೇಣುಕಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಮಂಗಳೂರಿನ ತನ್ನ ಗೆಳೆಯ ಆದೇಶ್ ಎಂಬಾತನನ್ನು ಭೇಟಿಯಾಗಲು ದುಬೈನಿಂದ ಬಂದಿದ್ದಳು.
ಶುಕ್ರವಾರ ಸಂಜೆ ಕೋರಮಂಗಲದ ಮಾಲ್‌ಗೆ ಸಿನಿಮಾ ನೋಡಲು ಹೋಗಿದ್ದರು. ಅವರು ಫ್ಲಾಟ್‌ಗೆ ಹಿಂದಿರುಗುವ ಮೊದಲು ಜಗಳವಾಡಿಕೊಂಡಿದ್ದರು. ಅಲ್ಲಿ ಅವರ ನಡುವೆ ವಾದ ವಿವಾದ ನಡೆಯಿತು ಎಂದು ತಿಳಿದುಬಂದಿದೆ.

ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆದೇಶ್ ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಮುಂಜಾನೆ ಆಕೆಯನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಆರು ತಿಂಗಳ ಹಿಂದೆ ಆದೇಶ್ ಮತ್ತು ಅರ್ಚನಾ ಡೇಟಿಂಗ್ ಆಪ್‌ ಮೂಲಕ ಪರಿಚಯವಾಗಿದ್ದರು.

ಕೋರಮಂಗಲ ಪೊಲೀಸರು ಆದೇಶ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ, ಸಂತ್ರಸ್ತೆಯ ಪೋಷಕರು ದೂರು ದಾಖಲಿಸಲು ಕಾಯುತ್ತಿದ್ದಾರೆ. ಅರ್ಚನಾ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದು ಪೊಲೀಸರಿಗೆ ಇನ್ನೂ ಖಚಿತವಾಗಿಲ್ಲ. ಅವರು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಆಕೆ ಮದ್ಯದ ಅಮಲಿನಲ್ಲಿದ್ದಳೇ ಎಂದು ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

bengaluru

ಸಂತ್ರಸ್ತೆ ನಾಲ್ಕು ದಿನಗಳ ಹಿಂದೆ ಆದೇಶ್‌ನನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಅವರ ನಡುವೆ ಜಗಳ ನಡೆದಿದೆ ಎಂದು ಶಂಕಿಸಲಾಗಿದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಆದೇಶ್‌ನನ್ನು ನಾವು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here