Home ಬೆಂಗಳೂರು ನಗರ 4 ಮುದ್ದಾದ ಮರಿಗಳು ಬನ್ನೇರುಘಟ್ಟ ಉದ್ಯಾನದ ಆಕರ್ಷಣೆ

4 ಮುದ್ದಾದ ಮರಿಗಳು ಬನ್ನೇರುಘಟ್ಟ ಉದ್ಯಾನದ ಆಕರ್ಷಣೆ

64
0

ಹುಲಿ ಅನುಷ್ಕಾ ಮತ್ತು ಸಿಂಹಿಣಿ ಸನಾ ಇತ್ತೀಚೆಗೆ ತಲಾ 2 ಹೆಣ್ಣು ಮರಿಗಳಿಗೆ ಜನ್ಮ ನೀಡಿದರು

ಬೆಂಗಳೂರು:

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಮಿಥುನ್ ಮತ್ತು ಅನುಷ್ಕಾ ಹಾಗು ಸಿಂಹ ಶಂಕರ್ ಮತ್ತು ಸಿಂಹಿಣಿ ಸನಾ ತಲಾ ಎರಡು ಹೆಣ್ಣು ಮರಿಗಳಿಗೆ ಜನ್ಮ ನೀಡಿದೆ. ಮರಿಗಳು ಆರೋಗ್ಯಕರ ಮತ್ತು ಉತ್ತಮವಾಗಿದ್ದು, ಲವಲವಿಕೆಯಿಂದಿವೆ.

ಸಾರ್ವಜನಿಕರು ಪ್ರಾಣಿಗಳ ಆಹಾರ ಮತ್ತು ಪಶುವೈಧ್ಯಕೀಯ ಆರೈಕೆಗೆ ಕೊಡುಗೆ ನೀಡುವ ಮೂಲಕ ಅವುಗಳನ್ನು ದತ್ತುಪಡೆಯಬಹುದಾಗಿರುತ್ತದ.

ದತ್ತುಸ್ವೀಕಾರದ ಜೊತೆಗೆ ದತ್ತು ಸ್ವೀಕಾರ ಶುಲ್ಕದ 25% ಅನ್ನು ಹೆಚ್ಚುವರಿಯಾಗಿ ನೀಡುವ ಮೂಲಕ ನಾಗರಿಕರು ತಾವು ದತ್ತು ಪಡೆದ ಪ್ರಾಣಿಗಳಿಗೆ ಹೆಸರಿಸಲು ಅವಕಾಶವನ್ನು ಪಡೆಯಬಹುದಾಗಿರುತ್ತದೆ.

ದತ್ತುಸ್ವೀಕಾರ ಕಾರ್ಯಕ್ರಮದ ಮೂಲಕ ದತ್ತುಪಡೆದವರು ಹೆಸರಿಸಿರುವ ಕೆಲವು ಸಿಂಹಗಳು ಜಿ.ಕೃಷ್ಣ, ಶೇರ್-ಯಾರ್, ವಿಜಯನರಸಿಂಹ ಮತ್ತು ಪುಷ್ಪ

2020-21 ರ ಆರ್ಥಿಕ ವರ್ಷದಲ್ಲಿ 230 ದತ್ತುದಾರರು, 299 ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಾಣಿಗಳ ದತ್ತು ಕಾರ್ಯಕ್ರಮಕ್ಕೆ ಒಟ್ಟು ರೂ. 56,82,00/- ಕೊಡುಗೆ ನೀಡಿರುತ್ತಾರೆ.

ಇತ್ತೀಚೆಗೆ ಸಿಡಿವೈಮ್ಯಾಕ್ಸ್ (ಇಂಡಿಯಾ) ಫಾರ್ಮಾ ಪ್ರೈವೇಟ್ ಲಿಮಿಟೆಡ್, ಜಿಗಣಿ ಸಂಸ್ಥೆಯವರು ಏಳು ಆನೆಗಳನ್ನು ದತ್ತು ಪಡೆದಿರುತ್ತಾರೆ ಮತ್ತು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಅಡಿಯಲ್ಲಿ ಸಫಾರಿಗಾಗಿ ಒಂದು ಬೊಲೆರೊ ಜೀಪ್ ಅನ್ನು ದಾನ ಮಾಡಿರುತ್ತಾರೆ.

ಮೊದಲು ಬಂದವರಿಗೆ ಮೊದಲ ಆಧ್ಯತೆ ಆಧಾರದ ಮೇಲೆ ದತ್ತು ಮತ್ತು ನಾಮಕರಣ ಮಾಡಲು ಅವಕಾಶವನ್ನು ಕಲ್ಪಿಸಲಾಗುವುದು. ಪ್ರಾಣಿಗಳನ್ನು ದತ್ತುಪಡೆಯಲು ಮತ್ತು ಅವುಗಳಿಗೆ ಹೆಸರಿಡಲು ಆಶಕ್ತಿಯಿದ್ದಲ್ಲಿ ತಮ್ಮ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಶಿಕ್ಷಣಾಧಿಕಾರಿಯವರನ್ನು educationbbp@gmail.com ಇಮೈಲ್ ಮೂಲಕ ಸಂಪರ್ಕಿಸಲು ಕೋರಲಾಗಿದೆ.

ದತ್ತು ಪಡೆಯಲು ಲಭ್ಯವಿರುವ ಕೆಲವು ಪ್ರಾಣಿಗಳು

  1. ಹೆಣ್ಣು ಹುಲಿ ಅನುಷ್ಕಾ ಮತ್ತು ಅವಳ ಎರಡು ಹೆಣ್ಣು ಮರಿಗಳು ಫೆಬ್ರವರಿ 12, 2021 ರಂದು ಜನಿಸಿದವು
  2. ಸಿಂಹಿಣಿ ಸನಾ ಮತ್ತು ಅವಳ ಎರಡು ಹೆಣ್ಣು ಮರಿಗಳು 2021 ಜನವರಿ 15 ರಂದು ಜನಿಸಿದವು
  3. 2021 ಜನವರಿ 13 ರಂದು ಜನಿಸಿದ ಆನೆ ವೇದದ ಹೆಣ್ಣು ಮರಿ
  4. ಜೀಬ್ರಾ ಕಾವೇರಿಯ ಹೆಣ್ಣು ಮರಿ 27 ಸೆಪ್ಟೆಂಬರ್ 2020 ರಂದು ಜನಿಸಿದವು
  5. ಹಿಪಪಾಟಮಸ್ ದಶ್ಯಾ ಮತ್ತು ಅವಳ ಗಂಡು ಮರಿ 2020 ರ ಜುಲೈ 27 ರಂದು ಜನಿಸಿದವು
  6. ಸಿಂಹಿಣಿ ಸಾನಿಯಾ ಮತ್ತು ಅವಳ ಎರಡು ಹೆಣ್ಣು ಮರಿಗಳು ಮಾರ್ಚ್ 22, 2020 ರಂದು ಜನಿಸಿದವು
  7. ಅದ್ಭುತವಾದ ಲಂಗೂರ್ ರೇಶ್ಮಿ ಮತ್ತು ಅವರ ಹೆಣ್ಣು ಮರಿ 16 ಮಾರ್ಚ್ 2020 ರಂದು ಜನಿಸಿದವು
  8. ಹನುಮಾನ್ ಲಂಗೂರ್ ಆದಿತಿ ಮತ್ತು ಅವರ ಶಿಶು 22 ಫೆಬ್ರವರಿ 2020 ರಂದು ಜನಿಸಿದವು
  9. ಗ್ರೇ ವುಲ್ಫ್ ಅಕಿರಾ ಮತ್ತು ಅವಳ ಮೂರು ಗಂಡು ಮತ್ತು ಒಂದು ಹೆಣ್ಣು ಮರಿ 2020 ರ ಫೆಬ್ರವರಿ 3 ರಂದು ಜನಿಸಿದವು
  10. ಜಿರಾಫೆ ಗೌರಿ, ಸುಮಾರು 5 ವರ್ಷ
  11. ರಕ್ಷಿಸಲಾದ ಸುಮಾರು 5 ವರ್ಷ ವಯಸ್ಸಿನ ಗಂಡು ಚಿರತೆ
  12. ರಕ್ಷಿಸಲಾದ ಸುಮಾರು 4 ವರ್ಷ ವಯಸ್ಸಿನ ಹೆಣ್ಣು ಚಿರತೆ

ಈ ವರ್ಷ ಇಲ್ಲಿಯವರೆಗೆ, 13 ಪ್ರಾಣಿಗಳನ್ನು ದತ್ತು ಪಡೆಯಲು 8 ಜನರು ರೂ .34,000 ಕೊಡುಗೆ ನೀಡಿದ್ದಾರೆ.

LEAVE A REPLY

Please enter your comment!
Please enter your name here