Home ಬೆಂಗಳೂರು ನಗರ ನಗರದಲ್ಲಿ ಕುಸಿದ ಮನೆ; ತಪ್ಪಿದ ದುರಂತ

ನಗರದಲ್ಲಿ ಕುಸಿದ ಮನೆ; ತಪ್ಪಿದ ದುರಂತ

22
0
5-decade-old Bengaluru building comes crashing down, caught on camera
Advertisement
bengaluru

ಮಾಲೀಕರ ವಿರುದ್ಧ ಕ್ರಮ: ವೀರಭದ್ರಸ್ವಾಮಿ

ಬೆಂಗಳೂರು:

ನಗರದಲ್ಲಿ ಇಂದು ಬೆಳಗ್ಗೆ ಭಾರಿ ಮನೆಯೊಂದು ಸಂಪೂರ್ಣ ಕುಸಿದ ದುರ್ಘಟನೆ ನಡೆದಿದೆ.

ವಿಲ್ಸನ್ ಗಾರ್ಡನ್ ಲಕ್ಕಸಂದ್ರದಲ್ಲಿ ಈ ದುರ್ಘಟನೆ ನಡೆದಿದೆ. ಎರಡು ವರ್ಷದ ಹಿಂದೆಯೇ ಈ ಮನೆ ತುಸು ವಾಲಿತ್ತು ಆದರೂ 50ಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರು ಅದರಲ್ಲಿ ವಾಸವಾಗಿದ್ದರು. ಕಟ್ಟಡದ ಮಾಲೀಕರು ಕಟ್ಟಡವನ್ನು ದುರಸ್ತಿ ಮಾಡುವ ಅಥವಾ ಕೆಡುವುವ ಕಾರ್ಯಕ್ಕೆ ಮುಂದಾಗಿರಲಿಲ್ಲ ಎಂದು ಹೇಳಲಾಗಿದೆ.

ಇಂದು ಬೆಳಗ್ಗೆ ಕಟ್ಟಡ ಮತ್ತೆ ವಾಲಲು ಶುರುವಾಗಿದೆ. ಕೂಡಲೇ ಮನೆಯ ಬೇರೆಬೇರೆ ಅಂತಸ್ತುಗಳಿದ್ದವರು ಹೊರಗೆ ಓಡಿ ಬಂದಿದ್ದಾರೆ.. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಕ್ಕೆ ಕರೆ ಮಾಡಿದ್ದಾರೆ. ಕೂಡಲೇ ಧಾವಿಸಿ ಬಂದ ಇವರು ಮನೆಯ ಬಳಿ ಯಾರೂ ಸುಳಿಯದಂತೆ ಕಾವಲು ಹಾಕಿದ್ದಾರೆ.

bengaluru bengaluru

ಈ ಸಂದರ್ಭದಲ್ಲಿ ಕಟ್ಟಡ ಸಂಪೂರ್ಣ ಕುಸಿದಿದೆ. ಅದು ಬಿದ್ದ ರಭಸಕ್ಕೆ ಭಾರಿ ಸದ್ದಿನೊಂದಿಗೆ ಅಪಾರ ಧೂಳು ಕವಿದಿದೆ. ದೂರ ನಿಂತವರು ಗಾಬರಿಯಿಂದ ಚೆದುರಿದ್ದಾರೆ. ಮನೆಯಲ್ಲಿದ್ದವರು ನಿರ್ಲಕ್ಷ್ಯ ಮಾಡದೇ ಹೊರಗೆ ಧಾವಿಸಿದ್ದರಿಂದ ಮತ್ತು ಹೆಚ್ಚಿನವರು ಕೆಲಸಗಳಿಗಾಗಿ ಹೊರಗೆ ತೆರಳಿದ್ದರಿಂದ ಭಾರಿ ದುರಂತ ತಪ್ಪಿದೆ.

ಹೊರಗೆ ಧಾವಿಸಿ ಬಂದವರು, ಸುತ್ತಮುತ್ತಲಿನ ನಿವಾಸಿಗಳು ಕಟ್ಟಡ ಕುಸಿದ ರಭಸಕ್ಕೆ ತೀವ್ರ ಭಯಭೀತರಾಗಿದ್ದರು. ಕುಸಿದ ಕಟ್ಟಡ ತೆರವು ಮಾಡಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ವಿಲ್ಷನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಲೀಕರ ವಿರುದ್ಧ ಕ್ರಮ:

ಲಕ್ಕಸಂದ್ರದಲ್ಲಿ ಮೆಟ್ರೋ ಕಾಮಗಾರಿಯಿಂದ ಶಿಥಿಲಗೊಂಡಿತ್ತು ಎನ್ನಲಾಗಿರುವ ಬಹುಮಹಡಿ ಕಟ್ಟಡ ಏಕಾಏಕೀ ಕುಸಿದು ಬಿದ್ದಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಕಟ್ಟಡ ಕುಸಿಯುವ ಮಾಹಿತಿ ತಿಳಿದ ಮೊದಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಮುನ್ನೇಚ್ಚರಿಕೆ ಕ್ರಮವಾಗಿ ಬೆಸ್ಕಾಂ ಲೈನ್ ಬಂದ್ ಮಾಡಿಸಿದ್ದರು. ಕಟ್ಟಡ ಕುಸಿತವಾಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ದಿಕ್ಕಾಪಾಲಾಗಿ ಓಡಿದ್ದಾರೆ.

ಘಟನೆಯ ಕುರಿತು ಮುನ್ನೇಚ್ಚರಿಕೆ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಕಟ್ಟಡ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಮೂರು ಅಂತಸ್ತಿನ ಕಟ್ಟಡವನ್ನು 1974ರಲ್ಲಿ ನಿರ್ಮಿಸಲಾಗಿದ್ದು, ಸುರೇಶ್ ಎಂಬುವವರಿಗೆ ಈ ಮನೆ ಸೇರಿದೆ.

ಇದು ಹಳೆಯ ಕಟ್ಟಡವಾಗಿದ್ದು, ಕಟ್ಟಡದ ಕುರಿತು ನಿರ್ಲಕ್ಷ್ಯ ವಹಿಸಿದ್ದರಿಂದ ಕಟ್ಟಡದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಜಂಟಿ ಆಯುಕ್ತ ವೀರಭದ್ರಸ್ವಾಮಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಕಟ್ಟಡದ ಮನೆಯಲ್ಲಿ ವಾಸಿಸುವುದಕ್ಕೆ ಯೋಗ್ಯವಾಗಿ ಇರಲಿಲ್ಲ. ಆದರೂ ಮನೆ ಬಾಡಿಗೆಗೆ ನೀಡಿದ್ದ ಹಿನ್ನೆಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇನ್ನು, ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಹಳೇ ಕಟ್ಟಡ ಹೊಂದಿದ ಮಾಲೀಕರಿಗೆ ನೋಟಿಸ್ ನೀಡಿ ತೆರವುಗೊಳಿಸುವಂತೆ ಸೂಚಿಸಲಾಗುವುದು ಎಂದರು.

Also Read: 5-decade-old Bengaluru building comes crashing down, caught on camera


bengaluru

LEAVE A REPLY

Please enter your comment!
Please enter your name here