Home ಬೆಂಗಳೂರು ನಗರ ಸೂರ್ಯನಗರದಲ್ಲಿ 600ಎಕರೆ ಜಾಗದಲ್ಲಿ ಶೇಕಡ 50ರಷ್ಟು ಸೈಟ್ ಗಳನ್ನು ಮಹಿಳೆಯರಿಗೆ ಮೀಸಲು : ವಿ.ಸೋಮಣ್ಣ

ಸೂರ್ಯನಗರದಲ್ಲಿ 600ಎಕರೆ ಜಾಗದಲ್ಲಿ ಶೇಕಡ 50ರಷ್ಟು ಸೈಟ್ ಗಳನ್ನು ಮಹಿಳೆಯರಿಗೆ ಮೀಸಲು : ವಿ.ಸೋಮಣ್ಣ

57
0

ಬೆಂಗಳೂರು:

ಬೆಂಗಳೂರಿನ ಸೂರ್ಯನಗರದಲ್ಲಿ 600ಎಕರೆ ಜಾಗದಲ್ಲಿ ಶೇಕಡ 50ರಷ್ಟು ಸೈಟ್ ಗಳನ್ನು ಮಹಿಳೆಯರಿಗೆ ಮೀಸಲು ಇಡಲಾಗುವುದು ಎಂದು ವಸತಿ ಸಚಿವ ವಿ ಸೋಮಣ್ಣ ಘೋಷಿಸಿದರು.

ಅವರು ಇಂದು ಸೆಂಟರ್ ಫಾರ್ ಆಡ್ವೋಕೆಸಿ ಮತ್ತು ರಿಸರ್ಚ್ ಸಿ.ಎಫ್.ಆರ್.ಐ ಮತ್ತು ಗೋವಿಂದರಾಜನಗರ ಮಂಡಲ ಮಹಿಳಾ ಮೋರ್ಚಾ ಸಹಯೋಗದಲ್ಲಿ 500ಮಹಿಳೆಯರಿಗೆ ಭಾಗ್ಯಲಕ್ಷ್ಮೀ ಭಾಂಡ್ ಮತ್ತು ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ವಿತರಣಾ ಸಮಾರಂಭವನ್ನು ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ದೀಪಾ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.

50 per cent sites in Suryanagar would be reserved for womens V Somanna 3

ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಬಡವರ ಬೇಕಾದ ಸೌವಲತ್ತು ಬಡವರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಮಾನವೀಯತೆಯ ಸಾಕರಮೂರ್ತಿಗಳು ಮಹಿಳೆಯರು.

ಹೆಣ್ಣು ಮಕ್ಕಳು ಕುಟುಂಬ ಹಾಗೂ ಸಮಾಜದ ಕಣ್ಣು. ಹೆಣ್ಣು ಮಗು ಹುಟ್ಟಿದರೆ ತಾತ್ಸರದಿಂದ ನೋಡುವ ಕಾಲ ಹೋಯಿತು. ಮಹಿಳೆಯರು ಪುರುಷರಷ್ಟೆ ಶಕ್ತಿವಂತರು ಎಂದು ರೂಪಿಸಿದ್ದಾರೆ. ಬಡತನ ರೇಖೆಯಿಂದ ಕೆಳಗೆ ಇರುವವರ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದರೆ ಅವರ ವಿದ್ಯಾಭ್ಯಾಸಕ್ಕೆ ಹಣಕಾಸಿನ ಮುಗ್ಗಟ್ಟು ಬರಬಹುದು ಹತ್ತು ಹಲವು ಅತಂಕದಿಂದ ಕುಟುಂಬ ನಲುಗುತ್ತದೆ. ಹೆಣ್ಣು ಮಗು ಹೆತ್ತ ತಾಯಿ, ತಂದೆಗೆ ಯಾವುದೇ ಹೊರೆಯಾಗದೇ ಮತ್ತು ಹೆಣ್ಣು ಶಿಶುಗಳ ಜನನ ಮತ್ತು ಪಾಲನೆಗೆ ಉತ್ತೇಜನ ನೀಡಲು ಭಾಗ್ಯಲಕ್ಷ್ಮೀ ಬಾಂಡ್ ಗಳನ್ನು ವಿತರಿಸಲಾಗುತ್ತಿದೆ.

ಅಪರ ಕಾರ್ಮಿಕ ಆಯುಕ್ತರಾದ ನರಸಿಂಹಮೂರ್ತಿ, ಉಪ ತಹಶೀಲ್ದಾರ್ ಕಲಾವತಿ, ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿ ಶೀಲಾರವರು, ಮಾಜಿ ಬಿ.ಬಿ.ಎಂ.ಪಿ.ಸದಸ್ಯರುಗಳಾದ ಶಾಂತಕುಮಾರಿ ,ಮೋಹನ್ ಕುಮಾರ್, ರಾಮಪ್ಪ, ವಾಗೀಶ್, ದಾಸೇಗೌಡ, ಜಯರತ್ನರವರು ಭಾಗವಹಿಸಿದ್ದರು. ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಮಹಿಳಾ ಮೋರ್ಚಾ ಅಧ್ಯಕ್ಷರಾದ ರತ್ನಂರವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here