Home ಬೆಂಗಳೂರು ನಗರ Covid-19: ಕರ್ನಾಟಕದಲ್ಲಿ 24 ಗಂಟೆಗಳಲ್ಲಿ 58,395 ಮಂದಿ ಗುಣಮುಖ; 30,309 ಹೊಸ ಪ್ರಕರಣ

Covid-19: ಕರ್ನಾಟಕದಲ್ಲಿ 24 ಗಂಟೆಗಳಲ್ಲಿ 58,395 ಮಂದಿ ಗುಣಮುಖ; 30,309 ಹೊಸ ಪ್ರಕರಣ

68
0

ಬೆಂಗಳೂರು:

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 58,395 ಕೋವಿಡ್ ಪ್ರಕರಣಗಳು ಮತ್ತು ಹೊಸದಾಗಿ 30,309 ಮಂದಿ ಚೇತರಿಸಿಕೊಂಡಿದ್ದು ಪ್ರಕರಣಗಳು ವರದಿಯಾಗಿದೆ.

ಕರ್ನಾಟಕದಲ್ಲಿ ಇದುವರೆಗೆ ವರದಿಯಾದ ಸೋಂಕು ಪ್ರಕರಣಗಳ ಸಂಖ್ಯೆ 22,72,374ಕ್ಕೆ ಏರಿಕೆಯಾಗಿದೆ ಮತ್ತು ಸದ್ಯ 5,75,028 ಪ್ರಕರಣಗಳು ಸಕ್ರಿಯವಾಗಿವೆ.

ಇಂದು ಕರ್ನಾಟಕದಲ್ಲಿ 525 ಮತ್ತು ಬೆಂಗಳೂರಿನಲ್ಲಿ 298 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಎಂದಿನಂತೆ ಬೆಂಗಳೂರಿನಲ್ಲಿ ಅತಿ ಹೆಚ್ಚು 8,676 ಪ್ರಕರಣಗಳು ವರದಿಯಾಗಿದ್ದು, ಉಳಿದಂತೆ ಹಾಸನ(2,324, ಬೆಳಗಾವಿ 2,118, ಮೈಸೂರು 1,916, ಬಳ್ಳಾರಿ 1,799, ತುಮಕೂರು 1,562, ಬೆಂಗಳೂರು ಗ್ರಾಮಾಂತರ 1,339, ಶಿವಮೊಗ್ಗ 1168 ಮತ್ತು ಕೋಲಾರದಲ್ಲಿ 1,021 ಒಂದು ಸಾವಿರಕ್ಕಿಂತ ಹೆಚ್ಚು ಖಚಿತ ಪ್ರಕರಣಗಳು ವರದಿಯಾಗಿವೆ.

ಸೊಂಕಿನಿಂದ ಮೃತಪಟ್ಟವರ ಪ್ರಮಾಣ ಶೇ. 1.73 ರಷ್ಟಿದೆ. ಹೊಸದಾಗಿ 58,395 ಮಂದಿ ಚೇತರಿಸಿಕೊಂಡಿದ್ದು, ಸದ್ಯ 5,75,028 ಪ್ರಕರಣಗಳು ಸಕ್ರಿಯವಾಗಿವೆ.

LEAVE A REPLY

Please enter your comment!
Please enter your name here