ಬೆಂಗಳೂರು:
ಗೌರಿಬಿದನೂರಿನ ಮಂಚೇನಹಳ್ಳಿ ಸಮೀಪದ ಟ್ರಾನ್ಸ್ ಫಾರ್ಮರ್ ಬಳಿ ಹಾಕಿರುವ ಗೈ ವೈರ್ ಎಳೆಯಲು ಹೋಗಿ ಆಕಸ್ಮಿಕ ವಿದ್ಯುತ್ ತಗಲಿ ಚಿಂದಿ ಆಯುವ ಬಾಲಕ ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ವರದಿಯಾಗಿದೆ.
ಮೃತಪಟ್ಟ ಬಾಲಕನನ್ನು ನಾಗೇಂದ್ರ (8) ಎಂದು ಗುರುತಿಸಲಾಗಿದ್ದು, ಆತ ಇಂದು ಬೆಳಗ್ಗೆ ಚಿಂದಿ ಆಯುವ ಸಂದರ್ಭದಲ್ಲಿ ಟ್ರಾನ್ಸ್ ಫಾರ್ಮ್ ರ್ ಗೆ ಹೊಂದಿಕೊಂಡಿರುವ ಚರಂಡಿ ಬಳಿ ಇರುವ ಗೈ ವೈರ್ ಅನ್ನು ಬಲವಾಗಿ ಎಳೆದಿದ್ದರಿಂದ ಗೈ ವೈರ್ ಎಲ್ ಟಿ ಕಿಟ್ ಗೆ ತಾಕಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತ ಪಟ್ಟಿರುತ್ತಾನೆ. ಈ ಘಟನೆ ಬೆಸ್ಕಾಂ ನಿರ್ಲಕ್ಷ್ಯದಿಂದ ಸಂಭವಿಸಿರುವುದಿಲ್ಲ. ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಬೇಟಿ ನೀಡಿದ್ದು, ಎಲೆಕ್ಟ್ರಿಕಲ್ ಇನ್ಸೆಪೆಕ್ಟರ್ ಅವರ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಚಿಕ್ಕಾಬಳ್ಳಾಪುರ- ಗೌರಿಬಿದನೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜೊತೆಗೆ ಟ್ರಾನ್ಸ್ ಫಾರ್ಮರ್ ಬಳಿವಿರುವ ಚರಂಡಿ ದುರಸ್ಥಿ ಕಾರ್ಯ ಕೂಡ ನಡೆಯುತ್ತಿದೆ. ಬಾಲಕ, ಚರಂಡಿ ಆಚೆವಿರುವ ಗೈ ವೈರ್ ಅನ್ನು ಎಳೆದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.