Home ಶಿಕ್ಷಣ ಎಸ್ಎಸ್ಎಲ್‌ಸಿ ಫಲಿತಾಂಶ: ಶೇ.99.99ರಷ್ಟು ತೇರ್ಗಡೆ, ಕೇವಲ ಓರ್ವ ವಿದ್ಯಾರ್ಥಿ ನಪಾಸು

ಎಸ್ಎಸ್ಎಲ್‌ಸಿ ಫಲಿತಾಂಶ: ಶೇ.99.99ರಷ್ಟು ತೇರ್ಗಡೆ, ಕೇವಲ ಓರ್ವ ವಿದ್ಯಾರ್ಥಿ ನಪಾಸು

75
0

ಬೆಂಗಳೂರು:

ಕೋವಿಡ್‌ ಸಾಂಕ್ರಾಮಿಕದ ಭೀತಿ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ರಾಜ್ಯದ ಒಟ್ಟು 8,74,443 ವಿದ್ಯಾರ್ಥಿಗಳ ಪೈಕಿ 8,74,442 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ.99.99ರಷ್ಟು ಫಲಿತಾಂಶ ಹೊರಬಿದ್ದಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶದ ವಿವರ ನೀಡಿದರು. ರಾಜ್ಯಾದ್ಯಂತ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿದೆ. ಓರ್ವ ವಿದ್ಯಾರ್ಥಿ ಮಾತ್ರ ತನ್ನ ಬದಲು ಬೇರೊಬ್ಬ ವ್ಯಕ್ತಿಯನ್ನು ಪರೀಕ್ಷೆ ಬರೆಯಲು ಕಳುಹಿಸಿದ್ದರಿಂದ ಆತನನ್ನು ಅನುತ್ತೀರ್ಣಗೊಳಿಸಲಾಗಿದೆ ಎಂದರು.

ವಿದ್ಯಾರ್ಥಿಗಳು https://sslc.karnataka.gov.in ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಬಹುದು ಎಂದು ಸಚಿವ ಬಿ. ಸಿ. ನಾಗೇಶ್ ಹೇಳಿದರು.

Also Read: 99.9 per cent students pass in Karnataka SSLC exam

LEAVE A REPLY

Please enter your comment!
Please enter your name here