Home ಬೆಂಗಳೂರು ನಗರ ಎಸ್‌ಸಿ, ಎಸ್ಟಿಗಳ ಭೂಮಿ ಕಬಳಿಕೆ ಎಸಿಬಿ ತನಿಖೆ: ಸಚಿವ ಅಶೋಕ್‌

ಎಸ್‌ಸಿ, ಎಸ್ಟಿಗಳ ಭೂಮಿ ಕಬಳಿಕೆ ಎಸಿಬಿ ತನಿಖೆ: ಸಚಿವ ಅಶೋಕ್‌

37
0
Revenue Minister R Ashoka
Advertisement
bengaluru

ಬೆಂಗಳೂರು:

ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿ ಶಾಂತನಪುರ ಗ್ರಾಮದಲ್ಲಿ ಸುಮಾರು 600 ಕೋಟಿ ರು.ಮೌಲ್ಯದ 200 ಎಕರೆ ಜಮೀನನ್ನು ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಭೂ ಕಬಳಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳ ತನಿಖೆಗೆ ಒಪ್ಪಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಬಿಜೆಪಿಯ ರಘುನಾಥ್‌ ರಾವ್‌ ಮಲ್ಕಾಪೂರೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಂತನಪುರ ಗ್ರಾಮದ ಸರ್ವೆ ನಂಬರ್‌ 9ರ 200 ಎಕರೆ ಜಮೀನು ಮೂಲತಃ ಸರ್ಕಾರಿ ಖರಾಬು ಜಮೀನಾಗಿದ್ದು, ಗ್ರಾಮದಲ್ಲಿ 50 ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ತಲಾ ನಾಲ್ಕು ಎಕರೆಯಂತೆ ಮಂಜೂರು ಮಾಡಲಾಗಿತ್ತು. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರನ್ನು ಬಲವಂತವಾಗಿ ಹೊರಹಾಕಿ ಭೂ ಕಬಳಿಕೆ ಮಾಡಿರುವುದು ಕಂಡು ಬಂದಿದೆ.

ಜಮೀನಿನ ಮೌಲ್ಯ ಸುಮಾರು 600 ಕೋಟಿ ರು. ಆಗಿದೆ. ಈ ಕುರಿತು 6 ಪ್ರಕರಣಗಳು ದಾಖಲಿಸಲಾಗಿದೆ. ಸದ್ಯ ಶಾಸಕರ ಮನವಿಯ ಮೇರೆಗೆ ಪ್ರಕರಣವನ್ನು ಎಸಿಬಿ ತನಿಖೆಗೆ ಒಪ್ಪಿಸಲಾಗುತ್ತದೆ ಎಂದು ಅಶೋಕ್‌ ತಿಳಿಸಿದರು.

bengaluru bengaluru

bengaluru

LEAVE A REPLY

Please enter your comment!
Please enter your name here