Home ಅಪರಾಧ ಕೊರಮಂಗಲ ಬಳಿ ಅಪಘಾತ: ಹೊಸೂರು ಶಾಸಕನ ಪುತ್ರ ಸೇರಿ 7 ಮಂದಿ ದುರ್ಮರಣ

ಕೊರಮಂಗಲ ಬಳಿ ಅಪಘಾತ: ಹೊಸೂರು ಶಾಸಕನ ಪುತ್ರ ಸೇರಿ 7 ಮಂದಿ ದುರ್ಮರಣ

527
0
Accident near Koramangala: 7 killed, including son of Hosur MLA

ಬೆಂಗಳೂರು:

ರಾಜಧಾನಿ ಬೆಂಗಳೂರಿನ ಕೊರಮಂಗಲ ಬಳಿ ಆಡಿ ಕಾರು ಅಪಘಾತಕ್ಕೀಡಾಗಿದ್ದು ಹೊಸೂರು ಶಾಸಕರ ಪುತ್ರ ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಪ್ರಕಾಶ್ ಅವರು ಡಿಎಂಕೆ ಶಾಸಕರಾಗಿದ್ದಾರೆ.

ಮಧ್ಯರಾತ್ರಿ 1.30 ಕ್ಕೆ ಸಂಭವಿಸಿದ ಅಪಘಾತದಲ್ಲಿ ಶಾಸಕರ ಪುತ್ರ ಕರುಣಾಸಾಗರ ಅವಳ ಗೆಳತಿ ಬಿಂದು ಮತ್ತು ಇತರ ಸ್ನೇಹಿತರು ಅಕ್ಷಯ್ ಗೋಯಲ್ (ಕೇರಳಾ) ಮೂಲದವನು, ಉತ್ಸವ್ (ಹರ್ಯಾಣ), ರೋಹಿತ್ (ಹುಬ್ಬಳ್ಳಿ), ಇಶಿತಾ ವಿಶ್ವಾಸ್ (ಮಹಾರಾಷ್ಟ್ರ), ಡಾ.ಧನುಶಾ ಸಾವನ್ನಪ್ಪಿದ್ದಾರೆ.

ಕಾರು ಕೋರಮಂಗಲ ಪೋಲಿಸ್ ಸ್ಟೇಶನ್ ಕಡೆಯಿಂದ 20 ನೇ ಮುಖ್ಯ ರಸ್ತೆಯಲ್ಲಿ ಫೋರಂ ಮಾಲ್ ಕಡೆಗೆ ಹೊರಟಿತ್ತು. ಕಾರು ಫುಟ್ ಪಾತ್, ನಂತರ ಮೂರು ಬೊಲ್ಲಾರ್ಡ್ ಗಳಿಗೆ ಡಿಕ್ಕಿ ಹೊಡೆದು ನಂತರ ಕಟ್ಟಡದ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದೆ.

ಕರುಣಾ ಸಾಗರ್ ಮತ್ತು ಉತ್ಸವ್ ಹೊರತುಪಡಿಸಿ ಉಳಿದವರು ಕೋರಮಂಗಲದ ಜೋಲೋ ಸ್ಟೇ ಪಿ.ಜಿಯಲ್ಲಿ ವಾಸವಿದ್ರು.

ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಶಾಸಕರ ಪುತ್ರ ಹಾಗೂ ಅವರ ಸ್ನೇಹಿತರು ಆ ಕಾರಿನಲ್ಲಿದ್ದರು ಎಂದು ತಿಳಿಸಿದರು‌.

LEAVE A REPLY

Please enter your comment!
Please enter your name here