Home ಸಿನಿಮಾ ಆಕ್ಟ್ -1978 ಗೆ ಬಲ ತುಂಬಿದ ಚಾಲೆಂಜಿಂಗ್ ಸ್ಟಾರ್

ಆಕ್ಟ್ -1978 ಗೆ ಬಲ ತುಂಬಿದ ಚಾಲೆಂಜಿಂಗ್ ಸ್ಟಾರ್

48
0

ಬೆಂಗಳೂರು:

‘ಆಕ್ಟ್-1978’ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಲತುಂಬಿದ್ದಾರೆ.

ಸಿನೆಮಾ ಕುರಿತು ಉತ್ತಮವಾಗಿ ವ್ಯಕ್ತವಾಗುತ್ತಿರುವ ಪ್ರೇಕ್ಷಕರ ಅಭಿಪ್ರಾಯಗಳು ಹಾಗೂ ವಿಮರ್ಶೆಗಳನ್ನು ಕೇಳಿ ಸಂತೋಷಗೊಂಡಿರುವ ದಚ್ಚು, ಆಕ್ಟ್-1978 ತಂಡದ ಸದಸ್ಯರನ್ನು ತಮ್ಮ ಮನೆಗೆ ಆಹ್ವಾನಿಸಿ, ಉಪಚರಿಸಿ, ತಂಡದ ಜೊತೆಗೆ ಬೆಂಬಲಕ್ಕೆ ನಿಲ್ಲುವುದಾಗಿ ಧೈರ್ಯ ತುಂಬಿ ಕಳುಹಿಸಿದ್ದಾರೆ.‌

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ಮೂಡಿಬಂದಿರುವ ‘ಆಕ್ಟ್ 1978’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿರುವುದನ್ನು ಗಮನಿಸಿದ ದರ್ಶನ್, ಇಡೀ ಚಿತ್ರತಂಡಕ್ಕೆ ಬಲ ತುಂಬಿದ್ದಾರೆ. ಸಿನಿಮಾವನ್ನು ನೋಡಿ ಎಂದು ತಮ್ಮ ಪರವಾಗಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

‘ಆಕ್ಟ್ 1978 ಸಿನಿಮಾ ಬಿಡುಗಡೆಯಾಗಿದೆ. ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಬಂದಿದೆ. ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಏನು ನಡೆಯುತ್ತಿದೆ ಎಂಬ ಅಂಶವನ್ನಿಟ್ಟು ಕಥೆ ಮಾಡಿದ್ದಾರೆ. ಕೊರೋನಾ ಲಾಕ್‌ಡೌನ್‌ನಿಂದ ಎಲ್ಲರೂ ಕಷ್ಟದಲ್ಲಿದ್ದರು. ಈಗ ನಿಧಾನವಾಗಿ ಹೊರಗೆ ಬರ್ತಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬನ್ನಿ ಸಿನಿಮಾ ನೋಡಿ’ ಎಂದು ವಿಡಿಯೋ ಮೂಲಕ ನಟ ದರ್ಶನ್ ವಿನಂತಿಸಿದ್ದಾರೆ.

ಡಿ ಬಾಸ್ ಆಹ್ವಾನದ ಮೆರೆಗೆ ನಿರ್ದೇಶಕ ಮಂಸೋರೆ, ನಟ ಸಂಚಾರಿ ವಿಜಯ್, ಛಾಯಾಗ್ರಾಹಕ ಸತ್ಯ ಹೆಗಡೆ ಸೇರಿದಂತೆ ಇತರೆ ತಂತ್ರಜ್ಞರು ಸೋಮವಾರ ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಮನೆಗೆ ಭೇಟಿ ನೀಡಿದ್ದರು.

LEAVE A REPLY

Please enter your comment!
Please enter your name here