ಬೆಂಗಳೂರು:
ಸ್ಯಾಂಡಲ್ ವುಡ್ ನಟಿ ಮಾಲಾಶ್ರೀ ಪತಿ , ನಿರ್ಮಾಪಕ ರಾಮು (52) ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ವಾರದ ಹಿಂದೆ ನಿರ್ಮಾಪಕ ರಾಮುಗೆ ಕೋವಿಡ್ ಪಾಸಿಟಿವ್ ಧೃಡವಾದ ಹಿನ್ನೆಲೆ ಅವರನ್ನು ಎಮ್ .ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಮು ಅವರು ಕೊನೆಯುಸಿರೆಳೆದಿದ್ದಾರೆ ಎಂಬ ವರದಿ ಆಗಿದೆ.
ಕುಣಿಗಲ್ ಮೂಲದ ರಾಮು, ಕೋಟಿ ರಾಮು ಎಂದೇ ಖ್ಯಾತರಾದ ಅವರು ನಿಧನಕ್ಕೆ ಇಡೀ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ. ರಾಮು ಅವರು ಗೂಳಿ, ಕಲಾಸಿಪಾಳ್ಯ, ಏ.ಕೆ.47, ಶಿವಾಜಿನಗರ, ಚಾಮುಂಡಿ, ನಂಜುಂಡಿ, ದುರ್ಗಿ, ಸರ್ಕಲ್ ಇನ್ಸ್ ಪೆಕ್ಟರ್, ಸೇರಿದಂತೆ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ.