ಕಲಬುರಗಿ, ಮೇ 7: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ನಗರದ ಬ್ರಹ್ಮಪುರ ಬಡಾವಣೆಯ ಬಸವನಗರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂಬರ್ 120 ರಲ್ಲಿ ಮತದಾನ ಮಾಡಿದರು.
ಪತ್ನಿ ರಾಧಾಬಾಯಿ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಮತಗಟ್ಟೆಗೆ ತೆರಳಿದ ಮಲ್ಲಿಕಾರ್ಜುನ ಖರ್ಗೆ ಹಕ್ಕು ಚಲಾವಣೆ ಮಾಡಿದರು.
We voted to save the Constitution and Democracy.
— Mallikarjun Kharge (@kharge) May 7, 2024
We voted for an India where Justice is supreme.
Every vote counts.
Do go out and vote to safeguard social justice and people’s rights.
ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನಾನು ಮತ ಹಾಕಿದ್ದೇನೆ.
ನ್ಯಾಯವೇ ಸರ್ವೋಚ್ಚವಾಗಿರುವ… pic.twitter.com/Bq3aAn4mfb
ಬೆಳಗ್ಗೆ 9:30ರ ಸುಮಾರಿಗೆ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 8.71 ಶೇ. ಮತದಾನವಾಗಿದೆ.